ತುಮಕೂರು ಯುವಕನಿಗೆ ಕೊರೊನಾ ವೈರಸ್ ಸೋಂಕು ತಗುಲಿಲ್ಲ

Coronavirs 24 Jan 20
Published on

ತುಮಕೂರು: ಚೀನಾದ ವುಹಾನ್​ನಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡ ನಂತರ ತುಮಕೂರಿಗೆ ಮರಳಿದ್ದ ಹನುಮಂತಪುರದ ಯುವಕನಲ್ಲಿ ಸೋಂಕು ಪತ್ತೆಯಾಗಿಲ್ಲ ಎಂದು ರಾಷ್ಟ್ರೀಯ ವೈರಾಣು ಸಂಶೋಧನಾ ಸಂಸ್ಥೆ ಖಚಿತಪಡಿಸಿದೆ. ಯುವಕ ಮೂರು ವರ್ಷದಿಂದ ಚೀನಾದಲ್ಲಿ ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿದ್ದಾನೆ. ಇತ್ತೀಚೆಗೆ ಹುಟ್ಟೂರಿಗೆ ಮರಳಿದಾಗ ನೆಗಡಿ ಕಾಣಿಸಿಕೊಂಡಿತ್ತು. ಇದು ನಗರವಾಸಿಗಳ ನಿದ್ದೆ ಕೆಡಿಸಿತ್ತು. ಆದರೆ ಇದೀಗ ಆ ಯುವಕನಿಗೆ ಸೋಂಕು ತಗುಲಿಲ್ಲ ಎಂಬುದು ಖಚಿತವಾದ ಹಿನ್ನೆಲೆಯಲ್ಲಿ ನಿರಾಳರಾಗಿದ್ದಾರೆ.

ಜ.26ರಂದು ಮರಳಿದ್ದ: ಕರೊನಾ ವೈರಸ್ ಹಾವಳಿ ವ್ಯಾಪಕವಾಗಿರುವ ಚೀನಾದ ವುಹಾನ್ ನಗರದಿಂದ 800 ಕಿ.ಮೀ. ದೂರದಲ್ಲಿರುವ ಹ್ಯಾಂಗ್ಝೂ ನಗರದಲ್ಲಿ ಯುವಕ ವ್ಯಾಸಂಗ ಮಾಡುತ್ತಿದ್ದ. ಜ.26ರಂದು ಈತ ಹುಟ್ಟೂರಿಗೆ ಮರಳಿದ್ದ.

ಬಂದ ಮರುದಿನವೇ ನೆಗಡಿ ಮತ್ತು ಶೀತದಿಂದ ಬಳಲಾರಂಭಿಸಿದ್ದ. ಇದರಿಂದಾಗಿ ಕರೊನಾ ವೈರಸ್ ಸೋಂಕಿನ ಶಂಕೆಯ ಹಿನ್ನೆಲೆಯಲ್ಲಿ ಮನೆಯಲ್ಲೇ ಆತನನ್ನು ಪ್ರತ್ಯೇಕ ಕೋಣೆಯಲ್ಲಿ ಇರಿಸಲಾಗಿತ್ತು. ಜಿಲ್ಲಾ ಆರೋಗ್ಯ ಇಲಾಖೆ ವಿಶೇಷ ತಂಡ ಆತನ ರಕ್ತ ಮತ್ತು ಕಫದ ಮಾದರಿ ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿತ್ತು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಚಂದ್ರಿಕಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net