ಎಸ್​ಐಟಿ ತನಿಖೆಯಿಂದ ಸತ್ಯಾಂಶ ಹೊರಬರಲಿದೆ

New DG New
Published on

ಹುಬ್ಬಳ್ಳಿ : ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿನ ಅಪರಾಧ ಪ್ರಕರಣಗಳ ಸತ್ಯಾಂಶ ಎಸ್​ಐಟಿ ತನಿಖೆಯಿಂದ ಹೊರ ಬರಲಿದೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ ಗುಂಡೂರಾವ್ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಸ್​ಐಟಿ ತನಿಖೆ ರಾಜಕೀಯ ಪ್ರೇರಿತ ಎಂಬ ಬಿಜೆಪಿ ನಾಯಕರು ಹೇಳಿಕೆ ಸರಿಯಲ್ಲ. ಇದೇ ಮಾತನ್ನು ದಕ್ಷಿಣ ಕನ್ನಡ ಜಿಲ್ಲೆಯ ಮುಖಂಡರು ಹೇಳಲಿ. ಪ್ರತಿಪಕ್ಷದವರ ಈ ರೀತಿಯ ಹೇಳಿಕೆಗಳಿಗೆ ಯಾವುದೇ ಆಧಾರ ಇಲ್ಲ ಎಂದರು.

ಎಸ್​ಐಟಿ ತನಿಖೆಗೆ ಸಾರ್ವಜನಿಕರು ಹಾಗೂ ಸಂಘ- ಸಂಸ್ಥೆಗಳ ಪ್ರಮುಖರು ಒತ್ತಡ ಹಾಕುತ್ತಿದ್ದರು. ಈ ಪ್ರಕರಣದಲ್ಲಿ ಅನೇಕ ಗೊಂದಲ ಉಂಟಾಗಿದ್ದು, ಸಾಕಷ್ಟು ಹೆಣಗಳನ್ನ ಮುಚ್ಚಿ ಹಾಕಿದ್ದಾರೆ ಎಂಬ ಆರೋಪ ಇದೆ. ಇದು ಎಷ್ಡರ ಮಟ್ಟಿಗೆ ಸರಿ ನೋಡಬೇಕು. ಈ ಆರೋಪಗಳು ಸತ್ಯವಾದದ್ದೋ ಅಥವಾ ಇಲ್ಲವೋ ಗೊತ್ತಿಲ್ಲ. ಆದಕಾರಣ, ಸಾಕಷ್ಟು ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.

ಪ್ರತಿಪಕ್ಷ ನಾಯಕ ಆರ್. ಅಶೋಕ ಅವರಿಗೆ ತಿಳಿವಳಿಕೆಯ ಕೊರತೆ ಇದೆ. ಹೀಗಾಗಿ, ಪ್ರತಿಯೊಂದು ವಿಚಾರದಲ್ಲಿ ರಾಜಕೀಯ ಮಾಡುತ್ತಾರೆ ಎಂದು ಟೀಕಿಸಿದರು.

ಜಿಎಸ್​ಟಿ ವಿಚಾರವಾಗಿ ಸಹಾಯವಾಣಿ ತೆರೆಯುವ ಬಿಜೆಪಿಯವರ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ದಿನೇಶ ಗುಂಡೂರಾವ್, ಜಿಎಸ್​ಟಿ ವಿಷಯದಲ್ಲಿಯೂ ಬಿಜೆಪಿಯರಿಗೆ ಸಾಕಷ್ಟು ತಿಳಿವಳಿಕೆ ಕೊರತೆ ಇದೆ. ಜಿಎಸ್​ಟಿ ವಿಚಾರವಾಗಿ ಸರ್ಕಾರಕ್ಕೆ ಮಧ್ಯ ಪ್ರವೇಶ ಮಾಡುವ ಅಧಿಕಾರ ಇಲ್ಲ ಎಂದರು.

ಆದಾಯ ತೆರಿಗೆ ಗೊಂದಲ ಬಗೆಹರಿಸಲು ಬೇಕಾದರೆ ಸಹಾಯವಾಣಿಯನ್ನು ಬಿಜೆಪಿಯವರು ತೆರೆಯಲಿ. ನಾವೇನೂ ವಿರೋಧಿಸುವುದಿಲ್ಲ ಎಂದರು.

ಮುಡಾ ಹಗರಣದಲ್ಲಿ ಇಡಿ ಮುಖ್ಯಮಂತ್ರಿ ಅವರಿಗೆ ಕ್ಲೀನ್​ಚಿಟ್ ಕೊಟ್ಟಿದೆ. ಮುಡಾ ಹಗರಣದ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪದೇಪದೆ ಹೇಳಿಕೆ ನೀಡುತ್ತಿರುತ್ತಾರೆ. ಇಡಿ, ಐಟಿ, ಸಿಬಿಐ ಬಗ್ಗೆ ಮಾತನಾಡಲು ಸಚಿವ ಜೋಶಿ ಅವರಿಗೆ ಯಾವ ನೈತಿಕತೆ ಇದೆ ? ಎಂದು ಪ್ರಶ್ನಿಸಿದ ಸಚಿವ ಗುಂಡೂರಾವ್, ಕೇಂದ್ರ ಸರ್ಕಾರಕ್ಕೆ ಇದರಿಂದ ಮುಖಭಂಗ ಆಗಿದೆ ಎಂದು ಟೀಕಿಸಿದರು.

ಬಿಜೆಪಿಯವರು ಐಟಿಯನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೆ. ಐಟಿಯನ್ನು ತಮ್ಮ ಪಕ್ಷದ ಸಂಸ್ಥೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net