ಡೆತ್​ ನೋಟ್​ನಲ್ಲಿ ಸತ್ಯ ಬಯಲು

Published on

ಶವವಾಗಿ ಪತ್ತೆಯಾಗಿದ್ದ ಬಾಲಕಿಯರದು ಆತ್ಮಹತ್ಯೆ

ಮುಳಬಾಗಿಲು: ತಾಲೂಕಿನ ಯಳಚೇಪಲ್ಲಿ ಗ್ರಾಮದಲ್ಲಿ ಇಬ್ಬರು ಬಾಲಕಿಯರು ಅ.4ರಂದು ಗ್ರಾಮದ ಹೊರ ವಲಯದ ರ್ನಿಜನ ಪ್ರದೇಶದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಪ್ರಕರಣ ತಿರುವು ಪಡೆದಿದ್ದು, ಇಬ್ಬರೂ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸತ್ಯ ಹೊರಬಿದ್ದಿದೆ.

ಬಾಲಕಿಯರ ಅಂತ್ಯಸಂಸ್ಕಾರ ನಂತರ ತನಿಖೆಗಿಳಿದ ಖಾಕಿ ಪಡೆಗೆ 13 ವರ್ಷದ ಚೈತ್ರಾಬಾಯಿ ಹಾಗೂ ಧನ್ಯಬಾಯಿ ಕೌಟುಂಬಿಕ ಸಮಸ್ಯೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಡೆತ್​ನೋಟ್​ನಿಂದ ಪತ್ತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net