

ಮುಳಬಾಗಿಲು : ತ್ರಿ- ಸೇವೆಗಳ ಲಾರ್ಡ್ ಬುದ್ಧ ಸರ್ಕಿಟ್ ಮೋಟಾರ್ ಸೈಕಲ್ ದಂಡಯಾತ್ರೆಯು ಸೋಮವಾರ ಸಂಚಾಲಕ ರಾಹುಲ್ ಲಕ್ಷ$್ಮಣ್ ಪಾಟೀಲ್ ನೇತೃತ್ವದಲ್ಲಿ ನೆರೆಯ ಆಂಧ್ರಪ್ರದೇಶದಿಂದ ರಾಜ್ಯದ ಗಡಿ ಮುಳಬಾಗಿಲಿನ ನಂಗಲಿ ಮೂಲಕ ಕರ್ನಾಟಕ ಪ್ರವೇಶಿಸಿತು.
ನಂಗಲಿ ಜೆಎಸ್ಆರ್ ಟೋಲ್ ಪ್ಲಾಜಾದಲ್ಲಿ ಕರ್ನಾಟಕ ಸಫಾಯಿ ಕರ್ಮಚಾರಿ ಪರಿಷತ್ನ ಅಧ್ಯಕ್ಷ ಜಗದೀಶ್ ಹಿರೇಮಣಿ ಮತ್ತು ಸಮುದಾಯ ಪ್ರತಿನಿಧಿಗಳೊಂದಿಗೆ ಔಪಚಾರಿಕವಾಗಿ ಸ್ವಾಗತಿಸಿ ಮಾತನಾಡಿ, ನರೇಂದ್ರ ಮೋದಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ಈ ಮೈಲಿಗಲ್ಲು ಸಾಗುತ್ತಿದೆ. ಇದು ಬುದ್ಧ ಪರಂಪರೆಯ ರಾಜತಾಂತ್ರಿಕತೆಯ ಪುನರುಜ್ಜೀವನ ಪ್ರತಿಬಿಂಬಿಸುತ್ತದೆ. ಹಿಮಾಲಯದಿಂದ ಹಿಂದು ಮಹಾಸಾಗರದವರೆಗೆ ಶಾಂತಿ, ಸಾಮರಸ್ಯ ಮತ್ತು ಏಕತೆಯ ಕಾಲಾತೀತ ಸಂದೇಶವನ್ನು ಈ ಯಾತ್ರೆ ಬಲಪಡಿಸುತ್ತದೆ ಎಂದರು. ರಾಷ್ಟ್ರೀಯ ಏಕತೆಯನ್ನು ಸಂಕೇತಿಸುವ ತಿರಂಗ ಹೊತ್ತ 50 ಸವಾರರು ಭಾಗವಹಿಸಿದ್ದರು. ಸೇವೆ ಮತ್ತು ಒಗ್ಗಟ್ಟಿನ ಮನೋಭಾವ ಮೂಡಿಸುವ ಆಪರೇಷನ್ ಸ್ಯಾಂಡ್ಹೂಟ್ ಆಚರಣೆಯನ್ನು ವೀಕ್ಷಿಸಿದರು.