ಕಿಡಿಗೇಡಿಗಳ ಕೃತ್ಯಕ್ಕೆ 12 ಮರಗಳು ಭಸ್ಮ

jlr1
Published on

ಜಗಳೂರು: ಪಟ್ಟಣದ ಚಳ್ಳಕೆರೆ ರಸ್ತೆಯ ಪೆಟ್ರೋಲ್ ಬಂಕ್ ರಸ್ತೆಯ ಪಕ್ಕದಲ್ಲಿ ಸಮೃದ್ಧಿಯಾಗಿ ಬೆಳೆದು ನಿಂತಿದ್ದ ಮರಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಐದಾರೂ ವರ್ಷದ 12 ಮರಗಳು ಸಂಪೂರ್ಣ ಸುಟ್ಟಿವೆ.

ಘಟನೆ ನಡೆದು ಎರಡ್ಮೂರು ದಿನಗಳಾದರೂ ಅರಣ್ಯ ಇಲಾಖೆ ಸಿಬ್ಬಂದಿ ಕೃತ್ಯದ ಬಗ್ಗೆ ಚಕಾರವೆತ್ತಿಲ್ಲ. ಸುಟ್ಟು ಒಣಗಿದ್ದ ಮರಗಳು ಗುರುವಾರ ರಾತ್ರಿ ಬೀಸಿದ ಭಾರಿ ಗಾಳಿ, ಮಳೆಗೆ ನೆಲಕ್ಕುರುಳಿವೆ.

ಘಟನೆಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಸುಟ್ಟ ಜಾಗದಲ್ಲಿ ಹೊಸದಾಗಿ ಸಸಿಗಳನ್ನು ನೆಟ್ಟು ಬೆಳಸಬೇಕು ಎಂದು ಹೋರಾಟಗಾರ ಜಗಜೀವನ್ ರಾಮ್ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net