ಮೂರು ದಿನವಾದ್ರೂ ಮರ ತೆರವಿಲ್ಲ

26kls6
ಕಳಸ-ಬಸ್ರಿಕಟ್ಟೆ ರಸ್ತೆಯ ತೋಟದೂರಿನಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮರ.
Published on

ಕಳಸ: ಗಾಳಿ-ಮಳೆಗೆ ಕಳಸ-ಬಸ್ರಿಕಟ್ಟೆ ಮುಖ್ಯರಸ್ತೆಯ ತೋಟದೂರು ಎಂಬಲ್ಲಿ ರಸ್ತೆಗೆ ಮರ ಬಿದ್ದು ಮೂರು ದಿನಗಳಾದರೂ ಅದನ್ನು ತೆರವು ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ.

ಬಸ್ರಿಕಟ್ಟೆ ಮಾರ್ಗವಾಗಿ ಶೃಂಗೇರಿಗೆ ಪ್ರತಿದಿನ ನೂರಾರು ವಾಹನಗಳು ತೆರಳುತ್ತವೆ. ಕಳೆದ ಮೂರು ದಿನಗಳ ಹಿಂದೆ ಸುರಿದ ಗಾಳಿ-ಮಳೆಗೆ ಈ ರಸ್ತೆಯಲ್ಲಿ ಮರ ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ತಕ್ಷಣ ಸ್ಥಳೀಯರು ವಾಹನ ಹೋಗುವಷ್ಟು ಮರದ ಕೊಂಬೆಗಳ ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು.
ಇದಾಗಿ ಮೂರು ದಿನ ಕಳೆದರೂ ರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನು ತೆರವು ಮಾಡಲು ಯಾರೂ ಮುಂದೆ ಬಂದಿಲ್ಲ. ಇದರಿಂದ ಈ ಭಾಗದಲ್ಲಿ ಸಂಚರಿಸುವ ವಾಹನಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದು, ಸಂಬಂಧಪಟ್ಟವರು ಕೂಡಲೇ ರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನು ತೆರವುಗೊಳಿಸಬೇಕು ಎಂದು ಸ್ಥಳೀಯರಾದ ಶ್ರೀಕಾಂತ್ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net