ಮರ ಬಿದ್ದು ಕಾರು ಜಖಂ

Published on

ಮೈಸೂರು: ನಗರದ ಮೈಸೂರು - ನಂಜನಗೂಡು ರಸ್ತೆಯಲ್ಲಿರುವ ಮರ ಬಿದ್ದು, ಕಾರು, ವಿದ್ಯುತ್ ಕಂಬ ಜಖಂಗೊಂಡಿವೆ. ಬ್ರಿಗೇಡ್ ಮೌಂಟನ್ ವ್ಯೆ ಅಪಾರ್ಟ್‌ಮೆಂಟ್ ಮುಂಭಾಗ ಇದ್ದ ಮರ
ರಸ್ತೆಯಲ್ಲಿ ನಿಲ್ಲಿಸಿದ ಕಾರೊಂದರ ಮೇಲೆ ಬಿತ್ತು. ಮತ್ತೊಂದು ಭಾಗ ವಿದ್ಯುತ್ ಕಂಬದ ಮೇಲೂ ಬಿದ್ದು ಆತಂಕ ಸೃಷ್ಟಿಸಿತ್ತು. ಹಲವು ವರ್ಷ ಹಳೆಯದಾದ ಗುಲ್ ಮೊಹರ್ ಮರ ಸಂಪೂರ್ಣವಾಗಿ ಒಣಗಿ ನಿಂತಿತ್ತು. ಇವುಗಳನ್ನು ತೆರವುಗೊಳಿಸುವಂತೆ ಶಾಸಕ ಟಿ.ಎಸ್.ಶ್ರೀವತ್ಸ, ನಗರಪಾಲಿಕೆ ಮಾಜಿ ಸದಸ್ಯ ಬಿ.ವಿ. ಮಂಜುನಾಥ್ ಅವರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ವಹಿಸಿರಲಿಲ್ಲ. ಸಬೂಬು ಹೇಳಿಕೊಂಡು ಬರುತ್ತಿದ್ದ ಪಾಲಿಕೆ ತೋಟಗಾರಿಕೆ ವಿಭಾಗದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮರ ಬಿದ್ದಿದೆ. ಎಚ್ಚೆತ್ತು ಕ್ರಮಕೈಗೊಳ್ಳಬೇಕು ಎಂದು ಬಿ.ವಿ.ಮಂಜುನಾಥ್ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net