ಮರ ಬಿದ್ದು ಕಾರು ಜಖಂ

car
ದುರ್ಗದಹಳ್ಳಿ ದೇವಸ್ಥಾನದ ಬಳಿ ನಿಲ್ಲಿಸಿದ್ದ ಕಾರಿನ ಮೇಲೆ ಮರ ಬಿದ್ದು ಜಖಂಗೊಂಡಿರುವುದು.
Published on

ಬಣಕಲ್: ದುರ್ಗದಹಳ್ಳಿ ದೇವಸ್ಥಾನದ ಬಳಿ ನಿಲ್ಲಿಸಿದ್ದ ಪ್ರವಾಸಿ ಕಾರಿನ ಮೇಲೆ ಮರ ಬಿದ್ದು ಕಾರು ಜಖಂಗೊಂಡಿದೆ.

ಶನಿವಾರ ಪ್ರವಾಸಿಗರು ಕಾರು ನಿಲ್ಲಿಸಿ ಬಂಡಾಜೆ ಜಲಪಾತಕ್ಕೆ ಹೋಗಿದ್ದರು. ಗಾಳಿಗೆ ಮರ ಬಿದ್ದಿದ್ದು, ಆ ಸಂದರ್ಭದಲ್ಲಿ ಅಲ್ಲಿ ಯಾರೂ ಇರಲಿಲ್ಲ. ಇನ್ನು ಪಟ್ಟಣ ಸಮೀಪದ ಜಾರ್‌ಗಲ್ ಗ್ರಾಮದ ಪ್ರಶಾಂತ್ ಅವರ ಮನೆ ಮಳೆಯಿಂದ ಜಖಂಗೊಂಡಿದೆ. ಬೆಟ್ಟಗೆರೆ ಪಿಡಿಒ ದರ್ಶನ್ ಸ್ಥಳ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net