ದೇವಾಲಯ ಅಭಿವೃದ್ಧಿಯಿಂದ ಊರು ಸಮೃದ್ಧ

inna
Published on

ಕಾರ್ಕಳ: ಧರ್ಮ ನಾವು ರಕ್ಷಣೆ ಮಾಡಿದರೆ, ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ. ಇನ್ನಾ ಮುದ್ದಾಣು ದೇಗುಲ ಅತ್ಯಂತ ಕಾರಣಿಕ ಶಕ್ತಿ ಕೇಂದ್ರ. ದೇಗುಲದ ಸೇವೆ ಮಾಡುವುದು ಪುಣ್ಯದ ಕಾರ್ಯ. ದೇವಾಲಯ ಅಭಿವೃದ್ಧಿಯಾದರೇ ಇಡೀ ಊರು ಅಭಿವೃದ್ಧಿಯಾದಂತೆ ಎಂದು ಬಂಟರ ಸಂಘ ಪುಣೆ ಅಧ್ಯಕ್ಷ ಇನ್ನಾ ಕುರ್ಕಿಲ್‌ಬೆಟ್ಟು ಬಾಳಿಕೆ ಸಂತೋಷ್ ಶೆಟ್ಟಿ ಹೇಳಿದರು.

ಇನ್ನಾ ಮುದ್ದಾಣು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ದಿವಾಕರ ಆರ್.ಶೆಟ್ಟಿ ಕಾಚೂರು ಪರಾಡಿ ದಂಪತಿಯನ್ನು ಗೌರವಿಸಲಾಯಿತು.

ಕ್ಷೇತ್ರದ ಪವಿತ್ರಪಾಣಿ ರಾಮ ಮಡ್ಮಣಾಯ ಅಧ್ಯಕ್ಷತೆ ವಹಿಸಿದ್ದರು. ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಉದ್ಯಮಿ ರತ್ನಾಕರ್ ಶೆಟ್ಟಿ, ಮುಂಡ್ಕೂರು, ಬಗ್ಗರ ಗುತ್ತು ದೇವಿಪ್ರಸಾದ್ ಶೆಟ್ಟಿ, ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಂದ್ರ ಶೆಟ್ಟಿ, ದಾಸಬೈಲ್ ಗುರುಪ್ರಸಾದ್ ಶೆಟ್ಟಿ, ದೇವಾಲಯ ಪ್ರಧಾನ ಅರ್ಚಕ ಶ್ರೀಶ ಭಟ್, ಕಾಚೂರು ಪರಾಡಿ ರಾಘು ಶೆಟ್ಟಿ, ದೀಪಕ್ ಕೋಟ್ಯಾನ್, ಉದ್ಯಮಿ ಕೆ.ಸಿ.ಕಾಮತ್, ಉದಯ್ ಕುಮಾರ್ ಶೆಟ್ಟಿ ಇನ್ನಾ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯ ಎಸ್.ಕೋಟ್ಯಾನ್ ಬೈಲುಮನೆ, ವಿಮಲಾ ರವಿ ಮಡ್ಮಣ್, ಸುಜಾತ ಗಿರಿಯಪ್ಪ ಪೂಜಾರಿ, ಮಂಜುಳಾ ಕುಶ ಮೂಲ್ಯ, ಗಣೇಶ್ ಆಚಾರ್ಯ, ಮಹೇಶ್ ಪುತ್ರನ್ ಇರ್ಮಾಡಿ ಮತ್ತಿತರಿದ್ದರು. ಸಮಿತಿ ಸದಸ್ಯ ಹರೀಶ್ ಶೆಟ್ಟಿ ದಡ್ಡುಮನೆ ಸ್ವಾಗತಿಸಿ, ಸಾಯಿನಾಥ್ ಶೆಟ್ಟಿ ಮುಂಡ್ಕೂರು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net