ಪಂದ್ಯಾವಳಿಗೆ ಎಲ್ಲರ ಪ್ರೋತ್ಸಾಹ ಅಗತ್ಯ

2 HBH 03
ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣದಲ್ಲಿ ಆಯೋಜಿಸಿದ್ದ ಎಚ್‌ಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ರೈಲ್ವೆ ಇಲಾಖೆ ನೌಕರ ಸಿಕಂದರ್ ಮಾತನಾಡಿದರು.ಗ್ರಾ.ಪಂ.ಅಧ್ಯಕ್ಷೆ ಉಪ್ಪಾರ ಹುಲಿಗೆಮ್ಮ ಕಾಳಪ್ಪ, ಪ್ರಮುಖರಾದ ಗಿರೀಶ ರಾಥೋಡ್, ಟಿ.ಕೊಟ್ರೇಶ ಇದ್ದರು.
Published on

ಹಗರಿಬೊಮ್ಮನಹಳ್ಳಿ: ಕ್ರಿಕೆಟ್ ಯುವ ಸಮೂಹವನ್ನು ಒಂದುಗೂಡಿಸುವ, ಸಾಮರಸ್ಯ ಮೂಡಿಸುವ ಆಟವಾಗಿದೆ. ಎಂದು ರೈಲ್ವೆ ಇಲಾಖೆ ನೌಕರ ಸಿಕಂದರ್ ಹೇಳಿದರು.

ತಾಲೂಕಿನ ಹಂಪಾಪಟ್ಟಣದಲ್ಲಿ ಎಚ್‌ಪಿಎಲ್ ಟೂರ್ನಾಮೆಂಟ್‌ಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಪಂದ್ಯಾವಳಿಗಳಿಗೆ ಪ್ರೋತ್ಸಾಹ ಅಗತ್ಯವಾಗಿದೆ. ಗ್ರಾಮೀಣ ಮಟ್ಟದ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ದೇಶೀಯ ಕ್ರೀಡೆಯಾದ ಖೋ-ಖೋ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪುರುಷರು ಹಾಗೂ ಮಹಿಳಾ ತಂಡಗಳು ಗೆಲುವು ಸಾಧಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿವೆ ಎಂದರು.

ಟೂರ್ನಾಮೆಂಟ್ ನೇತೃತ್ವ ವಹಿಸಿದ ಟಿ.ಕೊಟ್ರೇಶ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ರಿಕೆಟ್ ಸ್ಪರ್ಧೆಯೊಂದಿಗೆ ಯುವ ಸಮೂಹ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದರು. ಗ್ರಾಪಂ ಅಧ್ಯಕ್ಷೆ ಉಪ್ಪಾರ ಹುಲಿಗೆಮ್ಮ ಕಾಳಪ್ಪ, ಪ್ರಮುಖರಾದ ಗಿರೀಶ ರಾಥೋಡ್, ಶೀಗೆನಹಳ್ಳಿ ಚಂದ್ರು, ಗೂಳಿ ಕೊಟ್ರೇಶ, ಟಿ.ಸೋಮನಾಥ, ಶೀಗೆನಹಳ್ಳಿ ಬಸವರಾಜ, ಎಸ್ಡಿಎಂಸಿ ಅಧ್ಯಕ್ಷ ಎಚ್.ಸೋಮನಾಥ, ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಎಚ್.ರಮೇಶ, ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ತೀರ್ಥಪ್ರಸಾದ, ಸುವರ್ಣ ಪ್ರಶಸ್ತಿ ಪುರಸ್ಕೃತ ಗೊಂದಳಿ ರಾಮಣ್ಣ, ನಿರ್ಣಾಯಕರಾದ ಎಮ್.ಕೆ.ಕೊಟ್ರೇಶ, ಶಿಕ್ಷಕ ಕೆ.ವಿಶ್ವನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net