ಮನಗೆದ್ದ ಪಾದುಕಾ ಪಟ್ಟಾಭಿಷೇಕ ಪ್ರಸಂಗ

SDP PADUKA
Published on

ಸಿದ್ದಾಪುರ: ತಾಲೂಕಿನ ಕಸಿಗೆಯ ಕೇಶವನಾರಾಯಣ ದೇವಾಲಯದಲ್ಲಿ ಧಾರ್ವಿುಕ ಕಾರ್ಯಕ್ರಮ ಹಾಗೂ ಭುವನೇಶ್ವರಿ ತಾಳಮದ್ದಲೆ ಕೂಟ ಭುವನಗಿರಿ ಅವರಿಂದ ಪಾದುಕಾ ಪಟ್ಟಾಭಿಷೇಕ ಯಕ್ಷಗಾನ ತಾಳಮದ್ದಲೆ ನಡೆಯಿತು.

ತಾಳಮದ್ದಳೆಯ ಹಿಮ್ಮೇಳದಲ್ಲಿ ಗಜಾನನ ಭಟ್ ತುಳಗೇರಿ, ಮಂಜುನಾಥ ಹೆಗಡೆ ಕಂಚಿಮನೆ ಸಹಕರಿಸಿದರು.

ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಹಿರಿಯ ವಿದ್ವಾಂಸ ಜಿ.ಎಲ್. ಹೆಗಡೆ ಕುಮಟಾ ದಶರಥ, ಗಣಪತಿ ಹೆಗಡೆ ಗುಂಜಗೋಡ ಕೈಕೇಯಿ, ಜಯರಾಮ ತಳವಾಟ ಶ್ರೀರಾಮ, ಜಿ.ಕೆ. ಭಟ್ ಕಸಿಗೆ ಮಂಥರೆ ಪಾತ್ರ ನಿರ್ವಹಿಸಿ ಮೆಚ್ಚುಗೆಗಳಿಸಿದರು.

ಸಂಘಟಕ ಗಜಾನನ ಭಟ್ ಕಾರವಾರ ಸ್ವಾಗತಿಸಿದರು. ಶ್ರೀಪಾದ ಭಟ್ಟ ಗೋವಾ ಅಭಿನಂದನೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net