ಜ್ಞಾನದ ಜ್ಯೋತಿ ಬೆಳಗಿದ ಶ್ರೀ

The torch of knowledge was lit by Mr
ಬಸವನಬಾಗೇವಾಡಿಯ ಬಸವೇಶ್ವರ ದೇವಸ್ಥಾನದ ಮುಂದೆ ಸಿದ್ಧೇಶ್ವರ ಶ್ರೀಗಳ ಪ್ರವಚನ ಸೇವಾ ಸಮಿತಿವರು ಹಮ್ಮಿಕೊಂಡಿದ್ದ ಸಿದ್ಧೇಶ್ವರ ಶ್ರೀಗಳ ಗುರುನಮನ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಪನೆ ಮಾಡಲಾಯಿತು.
Published on

ಬಸವನಬಾಗೇವಾಡಿ: ಅಣ್ಣ ಬಸವಣ್ಣನವರ ಕಾಯಕ ದಾಸೋಹದ ಪರಿಕಲ್ಪನೆಯನ್ನು ಜಗತ್ತಿನಾದ್ಯಾಂತ ಪಸರಿಸುವ ಕಾರ್ಯವನ್ನು ಸಿದ್ಧೇಶ್ವರ ಶ್ರೀಗಳು ಮಾಡುವ ಮೂಲಕ ಜ್ಞಾನದ ಜ್ಯೋತಿ ಬೆಳಗಿಸಿದ್ದಾರೆ ಎಂದು ಪಟ್ಟಣದ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು ಹೇಳಿದರು.

ಮಂಗಳವಾರ ಪಟ್ಟಣದ ಬಸವೇಶ್ವರ ದೇವಸ್ಥಾನದ ಮುಂದೆ ಸಿದ್ಧೇಶ್ವರ ಶ್ರೀಗಳ ಪ್ರವಚನ ಸೇವಾ ಸಮಿತಿಯವರು ಹಮ್ಮಿಕೊಂಡಿದ್ದ ಸಿದ್ಧೇಶ್ವರ ಶ್ರೀಗಳ ಗುರುನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಹಕಾರಿ ಮಹಾಮಂಡಳಿ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಪ್ರವಚನದ ಮೂಲಕ ಸಮಾಜದಲ್ಲಿರುವ ಅನೇಕ ಮೌಢ್ಯತೆಯನ್ನು ಹೋಗಲಾಡಿಸಿ ಸಮಾಜದಲ್ಲಿ ಸುಂದರ ಬದುಕು ಕಟ್ಟಿಕೊಳ್ಳುವ ಜ್ಞಾನದ ಜ್ಯೋತಿಯನ್ನು ಪ್ರತಿಯೊಬ್ಬರಿಗೆ ಬಿತ್ತರಿಸುವ ಮೂಲಕ ಸುಂದರ ಸಮಾಜ ಕಟ್ಟುವ ಕಾರ್ಯವನ್ನು ಮಾಡಿದಂತ ಮಹಾನ್ ಸಂತರು ಎಂದರು.

ಪಟ್ಟಣದ ಗಣಪತಿ ಚೌಕ, ಕಿತ್ತೂರರಾಣಿ ಚನ್ನಮ್ಮಳ ವೃತ್ತದ ಹಾಗೂ ಪಟ್ಟಣ ಸೇರಿ ತಾಲೂಕಿನ ವಿವಿಧಡೆ ಅನೇಕ ವಿವಿಧ ಸಂಘ ಸಂಸ್ಥೆಗಳು ಸಿದ್ಧೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಪುಷ್ಪಾರ್ಚನೆ ಮಾಡಿ ಗುರುನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಾಲು ಹಾಗೂ ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಸಂಗಣ್ಣ ಕಲ್ಲೂರ, ಶೇಖರ ಗೊಳಸಂಗಿ, ಸುಭಾಸ ಚಿಕ್ಕೊಂಡ, ಬಬಲು ಅಗರವಾಲ, ಅಶೋಕ ಕಲ್ಲೂರ, ಎಸ್.ಎಸ್. ಹಿರೇಮಠ, ರಮೇಶ ಯಳಮೇಲಿ, ಶೇಖಪ್ಪ ನಾಯ್ಕೋಡಿ, ಸಂಕನಗೌಡ ಪಾಟೀಲ, ಮುತ್ತು ಚಿಕ್ಕೊಂಡ, ವಿನೂತ ಕಲ್ಲೂರ, ಶೇಖನಗೌಡ ಪಾಟೀಲ, ಭರತ್ ಅಗರವಾಲ, ಶಿವಾನಂದ ತೊಳನೂರ, ಸಚೀನ ಕಲ್ಲೂರ, ಗೊಲ್ಲಾಲಪ್ಪ ಉಪ್ಪಿನ, ಪೃಥ್ವಿ ನಾಯ್ಕೋಡ, ಈರಣ್ಣ ಕುಳಗೇರಿ, ಮಹಾಂತೇಶ ಹಾರಿವಾಳ, ಪ್ರಶಾಂತ ಮುಂಜಾನೆ, ಬಸವರಾಜ ಚಿಂಚೊಳ್ಳಿ, ಶಿವಾನಂದ ಒಣರೊಟ್ಟಿ, ಬಸವರಾಜ ಗೊಳಸಂಗಿ, ಸದಾನಂದ ಯಳಮೇಲಿ, ವಿಶಾಲ ಗಾಯಕವಾಡ, ಮುದುಕಪ್ಪ ಪಡಶೆಟ್ಟಿ, ಸುನೀಲ ಚಿಕ್ಕೊಂಡ, ಸುರೇಶ ಹೂಗಾರ, ಶಶಿ ಸ್ಥಾವರಮಠ, ಪಿಂಟು ಬೇದರಕರ, ಪ್ರವೀಣ ದಂಡವಾತಿ, ಮಹೇಂದ್ರ ಸಾಳುಂಕೆ, ರವಿ ಹಿರೇಮಠ, ಪಂಚಾಕ್ಷರಿ ಕಾಳಹಸ್ತೆಶ್ವರಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net