

ಲೋಕಾಪುರ: ಇಲ್ಲಿನ ರೈಲ್ವೆ ಸ್ಟೇಷನ್ ಬಳಿ ಬುಧವಾರ ಟೈಯರ್ ಸ್ಫೋಟಗೊಂಡು ಮರಳು ತುಂಬಿದ ಲಾರಿ ಬೆಂಕಿಗೆ ಆಹುತಿಯಾಗಿದೆ.
ಲಾರಿಗೆ ಬೆಂಕಿ ಹೊತ್ತಿಕೊಂಡಿರುವುದು ಅರಿಗಿವೆ ಬರುತ್ತಿದ್ದಂತೆ ಚಾಲಕ ಲಾರಿಯಿಂದ ಹಾರಿ ಜೀವ ಉಳಿಸಿಕೊಂಡಿದ್ದಾನೆ. ಅವಘಡದಲ್ಲಿ ಯಾವುದೇ ರೀತಿಯ ಸಾವು ನೋವು ಸಂಭವಿಸಿಲ್ಲ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.
ಮರಳು ತುಂಬಿದ ಲಾರಿ ಹುನಗುಂದ ತಾಲೂಕಿನ ಕರಡಿಯಿಂದ ಜಮಖಂಡಿ ತಾಲೂಕಿಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಠಾಣಾಧಿಕಾರಿ ಕೆ.ಬಿ.ಜಕ್ಕನ್ನವರ ಭೇಟಿ ನೀಡಿ ಪರಿಶೀಲಿಸಿದ್ದಾರೆ.