ಹೂವಿನಹಡಗಲಿ ಪುರಸಭೆ ಟೈಮೇ ಸರಿಯಿಲ್ಲ ! ಕೆಟ್ಟು ನಿಂತಿರುವ ಶಾಸ್ತ್ರೀ ವೃತ್ತದ ಗಡಿಯಾರ ಕಂಬ, ನಾಲ್ಕು ತಿಂಗಳಾದರೂ ಕಂಡಿಲ್ಲ ರಿಪೇರಿ

03-march-hdl-02
ಹೂವಿನಹಡಗಲಿಯ ಶಾಸ್ತ್ರೀ ವೃತ್ತದಲ್ಲಿರುವ ಗಡಿಯಾರ ಕಂಬ.
Published on

ಹೂವಿನಹಡಗಲಿ: ಪಟ್ಟಣದ ಪುರಸಭೆ ಕಚೇರಿ ಮುಂದಿರುವ ಶಾಸ್ತ್ರೀ ವೃತ್ತದಲ್ಲಿ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಗಡಿಯಾರ ಕಂಬದಲ್ಲಿನ ನಾಲ್ಕು ದಿಕ್ಕುಗಳಲ್ಲಿರುವ ಗಡಿಯಾರದ ಮುಳ್ಳುಗಳು ನಿಂತು ಹೋಗಿ 4 ತಿಂಗಳಾದರೂ ದುರಸ್ತಿಯಾಗಿಲ್ಲ.

ಶಾಸ್ತ್ರೀ ವೃತ್ತ ಪಟ್ಟಣದ ಪ್ರಮುಖ ಸರ್ಕಲ್ ಆಗಿದ್ದು, ನಿತ್ಯ ನೂರಾರು ಜನ ಈ ಮಾರ್ಗವಾಗಿ ಸಂಚರಿಸುತ್ತಾರೆ. ಬಹುತೇಕರು ಸಮಯಕ್ಕಾಗಿ ಈ ಗಡಿಯಾರವನ್ನು ನೋಡುತ್ತಿದ್ದರು. 4 ತಿಂಗಳಿಂದ ಅವರಿಗೆ ಸಮಯದ ಮಾಹಿತಿ ಇಲ್ಲದಂತಾಗಿದೆ. ‘ಯಾಕೊ ಪುರಸಭೆ ಟೈಮೇ ಸರಿ ಇಲ್ಲ’ ಎಂದು ಗೊಣಗ ತೊಡಗಿದ್ದಾರೆ.

ಸ್ವಚ್ಛತೆ ಮತ್ತಿತರ ಕೆಲಸಗಳಲ್ಲಿ ಬಿಡುವಿಲ್ಲದೆ ಕೆಲಸ ಮಾಡುತ್ತೇವೆ ಎಂದು ಪುರಸಭೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ಕೆಟ್ಟುಹೋಗ ಗಡಿಯಾರವನ್ನು ದುರಸ್ತಿಗೊಳಿಸಲು ಮಾತ್ರ ಮುಂದಾಗುತ್ತಿಲ್ಲ. ಪುರಸಭೆ ಅದ್ಯಕ್ಷರು, ಸದಸ್ಯರು ಈ ಗಡಿಯಾರ ಕಂಬದ ಮುಂದಿನಿಂದಲೇ ಓಡಾಡುತ್ತಾರೆ. ಆದರೆ, ಇತ್ತ ಕಣ್ಣು ಹಾಯಿಸಿಲ್ಲ. ಯಾಕೆ ದುರಸ್ತಿ ಗೊಳಿಸಿಲ್ಲವೆಂದು ಸಿಬ್ಬಂದಿಯನ್ನು ಪ್ರಶ್ನೆ ಮಾಡಿಲ್ಲ. ಈ ನಿರ್ಲಕ್ಷೃ ಆಶ್ಚರ್ಯವೆನಿಸುತ್ತದೆ.
ಗಡಿಯಾರ ಕಂಬ ನಿರ್ಮಾಣ ಮಾಡಲು ಲಕ್ಷಾಂತರ ರೂ. ಖರ್ಚು ಮಾಡಲಾಗಿದೆ. ಸರಿಯಾಗಿ ಬಳಕೆಯಾದರೆ ಅದು ಸಾರ್ಥಕವಾಗುತ್ತದೆ. ಕೂಡಲೇ ಗಡಿಯಾರ ಕಂಬಗಳನ್ನು ಸರಿಪಡಿಸಬೇಕು ಎಂಬುದು ಜನರ ಒತ್ತಾಸೆಯಾಗಿದೆ.

ಗಡಿಯಾರ ಕಂಬ ದುರಸ್ತಿಗೆ ಬಂದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಮುಳ್ಳುಗಳನ್ನು ರಿಪೇರಿ ಮಾಡಿಸಲಾಗುವುದು.ಎಚ್.ಇಮಾಮ್ ಸಾಹೇಬ್ಪುರಸಭೆ ಮುಖ್ಯಾಧಿಕಾರಿ, ಹೂವಿನಹಡಗಲಿ ಗಡಿಯಾರ ಕಂಬದ ದುರಸ್ತಿ ಸೇರಿ ಅಭಿವೃದ್ಧಿ ಕೆಲಸಗಳ ಬಗ್ಗೆ ಗಮನಕ್ಕೆ ತಂದರೂ, ಪುರಸಭೆ ಅಧಿಕಾರಿಗಳು, ಅಧ್ಯಕ್ಷರು ಸ್ಪಂದಿಸುತ್ತಿಲ್ಲ. ಇದು ಅವರ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತದೆ.ಈಟಿ.ಮಾಲತೇಶ್ಪುರಸಭೆ ಸದಸ್ಯ, ಹೂವಿನಹಡಗಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net