ಬಂದಿದೆ ಮಹಿಳೆ ಸಾಧನೆಗೆ ಚಪ್ಪಾಳೆ ತಟ್ಟುವ ಕಾಲ

Untitled-1
ಬೀಡಿಗಾನಹಳ್ಳಿಯ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೆಸಿಐ ಅಲ್ಯೂಮಿನಿ ಕ್ಲಬ್​ನ ರಾಷ್ಟ್ರೀಯ ಅಧ್ಯೆ ಮಧ್ಯಪ್ರದೇಶದ ಗ್ವಾಲಿಯರ್​ನ ಅಂಜಲಿ ಗುಪ್ತ ಭಾತ್ರ ಅವರು ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಿದರು. ಚನ್ನರಾಯಪಟ್ಟಣ ಗ್ರಾಪಂ ಸದಸ್ಯ ಮಂಜುನಾಥ್​, ಮಾಜಿ ಸದಸ್ಯ ಗೋಪಾಲರೆಡ್ಡಿ, ಮಾಜಿ ಚೇರ್ಮನ್​ ಮುನಿಕೃಷ್ಣಪ್ಪ ಇದ್ದರು.
Published on

ವಿಜಯಪುರ : ಪ್ರಸ್ತುತ ಮಹಿಳೆಯರ ಪ್ರಾಮುಖ್ಯತೆ ಹೆಚ್ಚಾಗಿದ್ದು, ನಾರಿ ಶಕ್ತಿ ನಾರಾಯಣಿ ಶಕ್ತಿಯಾಗಿ ಬದಲಾಗಿದೆ ಎಂದು ಜೆಸಿಐ ಅಲ್ಯೂಮಿನಿ ಕ್ಲಬ್​ನ ರಾಷ್ಟ್ರೀಯ ಅಧ್ಯೆ ಮಧ್ಯಪ್ರದೇಶದ ಗ್ವಾಲಿಯರ್​ ಅಂಜಲಿ ಗುಪ್ತ ಭಾತ್ರ ತಿಳಿಸಿದರು. ದೇವನಹಳ್ಳಿ ತಾಲೂಕು ಬೀಡಿಗಾನಹಳ್ಳಿಯ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಜಯಪುರ ಜೆಸಿಐ ಅಲ್ಯೂಮಿನಿ ಕ್ಲಬ್​ನಿಂದ ಸ್ವಸಹಾಯ ಸಂಗಳು ಆಯೋಜಿಸಿದ್ದ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಶತಮಾನದಿಂದಲೂ ಮಹಿಳೆಯರು ಬೇರೆಯವರಿಗೆ ಚಪ್ಪಾಳೆ ತಟ್ಟುತ್ತಾ ಬಂದಿದ್ದಾರೆ. ಆದರೆ ಇದೀಗ ಕಾಲ ಬದಲಾಗಿದೆ. ಮಹಿಳೆಯರ ಸಾಧನೆಗೆ ನಾವು ಚಪ್ಪಾಳೆ ತಟ್ಟುವ ಕಾಲ ರೂಪಿತವಾಗಿದೆ. ಪ್ರಪಂಚದಲ್ಲಿ ನಮ್ಮ ಚಿಂತನೆಗಳು ಬದಲಾಗಬೇಕಾಗಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಪ್ರಪಂಚವನ್ನೇ ಬದಲಾಯಿಸಬೇಕಾಗಿದೆ ಎಂದು ತಿಳಿಸಿದರು.

ಜೆಸಿಐ ಅಲ್ಯೂಮಿನಿ ಕ್ಲಬ್​ ಹಿರಿಯ ನರೇಶ್​ ನಾಯಕ್​ ಮಾತನಾಡಿ, ರಾಷ್ಟ್ರೀಯ ಅಧ್ಯೆ ಅಂಜಲಿ ಗುಪ್ತ ಭಾತ್ರ ಅವರು ಒಂದು ತಿಂಗಳಿನಿಂದ ದೇಶದಾದ್ಯಂತ ಎಲ್ಲ ಕ್ಲಬ್​ಗಳಿಗೆ ಭೇಟಿ ನೀಡುತ್ತಿದ್ದು, ಸಂಸತಿ ಸೇವಾ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿ ಕೈಲಾದಷ್ಟು ಸೇವೆ ನೀಡುತ್ತಿದ್ದಾರೆ ಎಂದು ತಿಳಿಸಿದರು. ಎನ್​ಜಿಒ ಸಂಸ್ಥೆಯ ಚಂದ್ರಕಲಾ ಮಾತನಾಡಿ, ಮಹಿಳೆಯರಿಗೆ ಬ್ಯೂಟಿ ಪಾರ್ಲರ್​, ಹೈನುಗಾರಿಕೆ, ಸಾಮ್ರಾಣಿ ಕಡ್ಡಿ ತಯಾರಿಕೆ, ಟೈಲರಿಂಗ್​ ಸೇರಿ ಹಲವು ಇಚ್ಛೆಯುಳ್ಳ ಉದ್ಯಮದಲ್ಲಿ ತರಬೇತಿ ನೀಡುವ ಜತೆಗೆ ಬಂಡವಾಳ ನೀಡಿ ಅವರು ಉತ್ಪತ್ತಿಸಿದ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವ ಕಾರ್ಯ ಮಾಡಲಾಗುತ್ತಿದೆ. ಆಸಕ್ತಿ ಇದ್ದವರು ತಮ್ಮನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು. ತಿಂಗಳಿನಲ್ಲಿ ಸಂಸ್ಥೆಗೆ 57 ಸದಸ್ಯರನ್ನು ಸೇರ್ಪಡೆಗೊಳಿಸಿದ ಅಧ್ಯಕ್ಷ ದಿನ್ನೂರು ವೆಂಕಟೇಶ್​ ಹಾಗೂ ದೇವನಹಳ್ಳಿಯ ಲೋಕೇಶ್​ ಅವರಿಗೆ ಪಾರಿತೋಷಕ ನೀಡಿ ಗೌರವಿಸಲಾಯಿತು. 6 ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.

ಜೆಸಿಐನ ಅಧ್ಯೆ ಶೀಲಾಭೈರೇಗೌಡ, ವಲಯ ಸಂಚಾಲಕ ಮುನಿಕೃಷ್ಣ, ನಿರ್ದೇಶಕ ಶ್ರೀನಿವಾಸ್​, ಉಪಾಧ್ಯಕ್ಷ ಜೆಸಿ.ವೆಂಕಟೇಶ್​, ವಲಯ 14ರ ಸಂಯೋಜಕ ಯೋಗೇಶ್​, ಜೆಆರ್​.ಮುನಿವೀರಣ್ಣ, ಸುಬ್ರಹ್ಮಣ್ಯ ಶೆಟ್ಟರು, ಬಿಜವಾರ ನಾಗರಾಜ್​, ಎಸ್​.ರಮೇಶ್​, ಸೀನಿಯರ್​ ಚೇಂಬರ್​ ಅಧ್ಯಕ್ಷ ಅನೀಸ್​ ಉರ್​ ರಹಮಾನ್​, ಕಾರ್ಯದರ್ಶಿ ಆನಂದ್​, ವಕೀಲ ಜಯರಾಮ್​, ಮಾರ್ಕೆಟ್​ ವೆಂಕಟೇಶ್​ ಇದ್ದರು.

ಸರ್ಕಾರದಿಂದ ಮಹಿಳೆಯರಿಗೆ ಸಾಕಷ್ಟು ಯೋಜನೆ ಜಾರಿಯಾಗಿವೆ. ಆದರೆ ಅವುಗಳು ಕೇವಲ ಪ್ರಭಾವಿ ವ್ಯಕ್ತಿಗಳ ಪಾಲಾಗುತ್ತಿವೆ. ಆದ್ದರಿಂದ ಅವುಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪುವಂತಾಗಬೇಕು. | ದಿನ್ನೂರು ವೆಂಕಟೇಶ್​ ವಿಜಯಪುರ ಜೆಸಿಐ ಅಲ್ಯೂಮಿನಿ ಕ್ಲಬ್​ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net