

ಬೆಂಗಳೂರು: ಕೈಯಲ್ಲಿ ಕಲ್ಲು ಹಿಡಿದ ಪುಂಡರ ಗ್ಯಾಂಗ್‌ವೊಂದು ದರೋಡೆ ಯತ್ನಿಸಿರುವ ಪ್ರಕರಣ ಚಿಕ್ಕನಾಯಕನಹಳ್ಳಿ ದಿಣ್ಣೆ ಸಮೀಪ ನಡೆದಿದ್ದು, ಘಟನೆಯ ದೃಶ್ಯ ವೈರಲ್ ಆಗಿದೆ.
ಅ.೯ ರ ಸಂಜೆ ೬.೪೦ ರ ಸುಮಾರಿಗೆ ಕಾರಿನಲ್ಲಿ ಕುಟುಂಬ ಸದಸ್ಯರೊಂದಿಗೆ ಚಾಲಕ ಬರುತ್ತಿದ್ದಾಗ ಚಿಕ್ಕನಾಯಕನಹಳ್ಳಿ ದಿಣ್ಣೆ ಸಮೀಪ ಕೈಯಲ್ಲಿ ಕಲ್ಲು ಹಿಡಿದ ಒಬ್ಬ ದುಷ್ಕರ್ಮಿ ಕಾರು ನಿಲ್ಲಿಸಲು ಮುಂದಾಗಿದ್ದಾನೆ. ಕಾರಿನಲ್ಲಿ ಮಗುವಿದ್ದ ಕಾರಣಕ್ಕೆ ದುಷ್ಕರ್ಮಿಗಳು ದರೋಡೆ ಮಾಡದೆ ಹಿಂದೆ ಸರಿದಿದ್ದಾರೆ. ಆದರೆ ಮಗುವಿದ್ದ ಕಾರನ್ನ ಬಿಟ್ಟು ಬೇರೆ ಕಾರುಗಳನ್ನು ತಡೆದು ದರೋಡೆ ಮಾಡಿರುವ ಶಂಕೆ ಕೂಡ ವ್ಯಕ್ತವಾಗಿದೆ.ಈ ಎಲ್ಲ ದೃಶ್ಯಗಳು ಕಾರಿನ ಡ್ಯಾಷ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಅಂಬರೀಶ್ ಎಂಬುವವರು ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನನ್ವಯ ಎ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ದೃಶ್ಯದಲ್ಲಿ ೩ ಮಂದಿ ಆರೋಪಿಗಳು ಇರುವುದು ಕಂಡು ಬಂದಿದ್ದು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.