ರೋಮಾಂಚನಗೊಳಿಸಿದ ಗಿರಿಜಾ ಕಲ್ಯಾಣ ನೃತ್ಯ ರೂಪಕ

DANCE PERFORMENCE IN KUMATA
Published on

ಕುಮಟಾ: ಇಲ್ಲಿನ ಗ್ರಾಮದೇವಿ ಶಾಂತಿಕಾ ಪರಮೇಶ್ವರಿ ದೇವಾಲಯದ ನವೀಕೃತ ಸಮುದಾಯ ಭವನದ ಲೋಕಾರ್ಪಣಾ ಪ್ರಯುಕ್ತ ಹಮ್ಮಿಕೊಂಡಿರುವ ಕಾರ್ಯಕ್ರಮಗಳಲ್ಲಿ ಸಾಹಿತಿ ಪೊ›. ಟಿ. ಜಿ. ಭಟ್ಟ ವಿರಚಿತ ’ಗಿರಿಜಾ ಕಲ್ಯಾಣ’ದ ನೃತ್ಯ ರೂಪಕ ಪ್ರದರ್ಶನ ವಿಶೇಷ ಜನಮೆಚ್ಚುಗೆಗೆ ಪಾತ್ರವಾಯಿತು.

ರೋಟರಿ ಪ್ರವರ್ತಿತ ನಾದಶ್ರೀ ಕಲಾ ಕೇಂದ್ರದ ಪುಟ್ಟ ವಿದ್ಯಾರ್ಥಿನಿಯರಾದಿಯಾಗಿ ಎಲ್ಲ ಮಹಿಳಾ ಕಲಾವಿದರು ಅಭಿನಯಿಸಿದ ಗಿರಿಜಾ ಕಲ್ಯಾಣ ಕಥಾನಕವು ನೃತ್ಯ ಮತ್ತು ಸಂಗೀತದ ಹೊಸ ಲೋಕವನ್ನು ತೆರೆದಿಟ್ಟಿತು.

ಸುಂದರ ಹಿನ್ನೆಲೆ, ಪಾತ್ರಕ್ಕೊಪ್ಪುವ ವೇಷಭೂಷಣಗಳು, ಭಕ್ತಿ ಪರಾಕಾಷ್ಠೆಯೆಗೆ ಕರೆದೊಯ್ಯುವ ಅಂಗಾಭಿನಯದ ಗಂಭೀರ ಸನ್ನಿವೇಶಗಳು ನೋಡುಗರ ಮನತಣಿಸಿ ಕರತಾಡನ ಗಿಟ್ಟಿಸಿತು.

ನೃತ್ಯರೂಪಕವನ್ನು ಆಸಕ್ತಿಯಿಂದ ಸಂಪೂರ್ಣವಾಗಿ ವೀಕ್ಷಿಸಿದ ಶಾಸಕ ದಿನಕರ ಶೆಟ್ಟಿ ಕಲಾವಿದರಿಗೆ ಬಹುಮಾನವಿತ್ತು ಪೋ›ತ್ಸಾಹಿಸಿದರು. ವಿದುಷಿ ನಯನಾ ಪ್ರಸನ್ನ, ಗೌರೀಶ ಯಾಜಿ, ರೂಪಾ ಪ್ರಭು, ಗೌರೀಶ ಯಾಜಿ ಅವರನ್ನು ಸನ್ಮಾನಿಸಲಾಯಿತು.

ನೃತ್ಯ ರೂಪಕ ಪ್ರದರ್ಶನಕ್ಕೆ ಮುನ್ನ ಗಿರಿಜಾ ಕಲ್ಯಾಣ ಕೃತಿಯನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಬಿಡುಗಡೆಗೊಳಿಸಿ ಶುಭಹಾರೈಸಿದರು.

ಕೃತಿಕಾರ ಪೊ›. ಟಿ.ಜಿ.ಭಟ್ ಮಾತನಾಡಿ, ಜಗತ್ತು ಇಂದು ಅನೇಕ ಬಗೆಯ ತಾರಕಾಸುರರ ದುರ್ವತನೆಯ ನಾನಾಸಂಕಟಗಳನ್ನು ಎದುರಿಸುತ್ತಿದೆ. ಇಂಥ ತಾರಕಾಸುರರ ನಿವಾರಣೆಯ ಪರಿಕಲ್ಪನೆಯೊಂದಿಗೆ ಗಿರಿಜಾ ಕಲ್ಯಾಣ ಕೃತಿ ಸಮರ್ಪಿಸಿದ್ದೇನೆ ಎಂದರು.

ದೇವಸ್ಥಾನದ ಆಡಳಿತ ಮಂಡಳಿಯ ಎಂ.ಬಿ.ಪೈ, ಅರ್ಚಕ ರಾಜು ಗುನಗ, ಪ್ರಶಾಂತ ಗುನಗ, ಪ್ರಕಾಶ ಗುನಗ, ನಾದಶ್ರೀ ಕಲಾಕೇಂದ್ರದ ಜಿ.ಎಸ್.ಹೆಗಡೆ ಇನ್ನಿತರರು ಇದ್ದರು. ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣ ಬಾಬಾ ಪೈ ಅಧ್ಯಕ್ಷತೆ ವಹಿಸಿದ್ದರು. ಕಿರಣ ಪ್ರಭು, ಮಂಜುನಾಥ ನಾಯ್ಕ, ಜಯದೇವ ಬಳಗಂಡಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net