ಮೂರು ದಿನಗಳ ಮುಂಗಾರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬ ಕಿಕ್ಕಿರಿದ ಜನರ ಮಧ್ಯೆ ಭಾರದ ಕಲ್ಲು ಎಳೆಯುವ ಸ್ಪರ್ಧೆಗೆ ಅದ್ಧೂರಿ ತೆರೆ

raichur
raichur
Published on

ರಾಯಚೂರು ಮುಂಗಾರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬ ಜಿಲ್ಲೆಯಲ್ಲಿ ಜನಪ್ರಿಯತೆ ಗಳಿಸುವುದರ ಮೂಲಕ ದೇಶಕ್ಕೆ ಮಾದರಿಯಾಗಿದೆಂದು ಸಂಸದ ಜಿ.ಕುಮಾರ ನಾಯಕ ಹೇಳಿದರು.

ನಗರದ ರಾಜೇಂದ್ರ ಗಂಜ್‌ನಲ್ಲಿ ಮುನ್ನೂರು ಕಾಪು ಸಮಾಜದಿಂದ ಆಯೋಜನೆ ಮಾಡಲಾಗಿದ್ದ ಎತ್ತುಗಳಿಂದ 2.5 ಭಾರದ ಕಲ್ಲು ಎತ್ತುವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು, ನಮ್ಮ ದೇಶ ರೈತರ ದೇಶ, ಮುನ್ನೂರು ಕಾಪು ಸಮಾಜದ ರೈತರ ಜೊತೆಯಾಗಿ ನಿಂತುಕೊಂಡು ಮುಂಗಾರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬ ಮೂಲಕ ರೈತರ ಕ್ರೀಡೆ ಸಂಸ್ಕೃತಿ, ಮತ್ತು ಜಾನಪದ ಸೊಗಡನ್ನು ಪರಿಚಯಸಿದ ಮುನ್ನೂರು ಕಾಪು ಸಮಾಜದ ಬೆಳ್ಳಿ ಹಬ್ಬಕ್ಕೆ ಆಗಮಿಸಿರುವುದು ಬಹಳ ಹೆಮ್ಮೆಯಾಗಿದೆ. ರಾಜ ಸೇರಿ ದೇಶದಲ್ಲಿ ಕಾರ ಹುಣ್ಣಿಮೆ ಬೇರೆ ಬೇರೆ ರೀತಿಯಲ್ಲಿ ಆಯೋಜನೆ ಮಾಡಲಾಗುತ್ತದೆ.

ಆದರೆ ಮುನ್ನೂರು ಕಾಪು ಸಮಾಜ ನಮ್ಮ ಜಿಲ್ಲೆ ವೈಶಿಷ್ಟವನ್ನು ಮುಂಗಾರು ಬೆಳ್ಳಿ ಹಬ್ಬದ ಮೂಲಕ ದೇಶಕ್ಕೆ ಪರಿಚಯಿಸಿದ ಕೀರ್ತಿ ಮುನ್ನೂರು ಕಾಪು ಸಮಾಜಕ್ಕೆ ಸಲ್ಲುತ್ತದೆ.ಮುಂಗಾರು ಬೆಳ್ಳಿ ಹಬ್ಬ ಎತ್ತು ಭೂಮಿ ಹಾಗೂ ರೈತರ ಶಕ್ತಿಯನ್ನು ಗುರುತಿಸುವ ಹಬ್ಬವಾಗಿದೆ.

ಇನ್ನೊಂದು ಮಾದರಿಯಾಗಿದೆ ಕಾರ್ಯವಾಗಿದೆ. ರೈತರು ಖುಷಿಯಾಗಿ ಇದ್ದಾರೆ ನಾಡು ಸಂತೋಷವಾಗಿ ಇರಲು ಸಾಧ್ಯ.ಮುನ್ನೂರು ಕಾಪು ಪ್ರತಿ ವರ್ಷ ರೈತರ ಅನುಕೂಲಕ್ಕಾಗಿ ಭಾರಿ ವಿಜೃಂಭಣೆ ಹಬ್ಬ ಆಚರಣೆ ಮಾಡುವ ಮೂಲಕ ರೈತರಿಗೆ ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯ ಎಂದರು.

ಜಿಲ್ಲೆಯ ಜನರ ಸಲಹೆ ಸೂಚನೆ ಪಡೆದು ನಿರಂತರ ಎರಡು ತಿಂಗಳ ಪ್ರಯತ್ನದ ಫಲ ಕೊನೆಗೂ ಕೇಂದ್ರ ಸರ್ಕಾರ ಆಂಧ್ರ ಮತ್ತು ತೆಲಂಗಾಣದ ಮಾದರಿಯಲ್ಲಿ ಕರ್ನಾಟಕ ರಾಜ್ಯದ ಮೆಣಸಿನಕಾಯಿ ಬೆಲೆ ಕುಸಿತ ಸಂದರ್ಭದಲ್ಲಿ ಕನಿಷ್ಠ ಹಸ್ತಕ್ಷೇಪ ಬೆಲೆಯ ಮೂಲಕ ರೈತರಿಗೆ ಅನುಕೂಲವಾಗಿದೆ. ರಾಜ್ಯದಲ್ಲಿ ಬೆಳೆಯುವ ಮೆಣಸಿನಕಾಯಿಗೆ ಕೇಂದ್ರ, ರಾಜ್ಯ ಸಂಯೋಜನೆಯಲ್ಲಿ ಕನಿಷ್ಠ ಹಸ್ತಕ್ಷೇಪ ಬೆಲೆ (ಎಂ.ಐ.ಪಿ) ಘೋಷಿಸಲಾಗಿದ್ದು, ಇದರಿಂದ ರೈತರ ಅನುಕೂಲವಾಗಿದೆ. ಜಿಲ್ಲೆ ಅಭಿವೃದ್ಧಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಚಿಕ್ಕಸೂಗೂರು ಚೌಕಿ ಮಠದ ಡಾ. ಸಿದ್ದಲಿಂಗಯ್ಯ ಮಹಾಸ್ವಾಮಿಗಳು ದಿವ್ಯಾ ಸಾನಿಧ್ಯವನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಹಬ್ಬದ ರೂವಾರಿ ಎ.ಪಾಪಾರೆಡ್ಡಿ, ಮಾಜಿ ಸಂಸದ ಬಿ.ವಿ. ನಾಯಕ, ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಜಯವಂತರಾವ್ ಪತಂಗಿ, ಮುನ್ನೂರು ಕಾಪು ಸಮಾಜದ ಹಿರಿಯ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net