

ನರಗುಂದ: ಇಲ್ಲಿನ ಅಂಜುಮನ್ ಏ-ಇಸ್ಲಾಂ ಕಮಿಟಿಯ ಆಡಳಿತಾವಧಿ ಮುಕ್ತಾಯಗೊಂಡಿದೆ. ನೂತನ ಸದಸರು ನೇಮಕಗೊಳ್ಳುವ ವರೆಗೆ ಸರ್ಕಾರ ವಕ್ಫ್ ಆಡಳಿತಾಧಿಕಾರಿಯನ್ನು ನೇಮಿಸಬೇಕು ಹಾಗೂ ತಕ್ಷಣವೇ ಚುನಾವಣೆ ಪ್ರಕ್ರಿಯೆ ನಡೆಸುವಂತೆ ನರಗುಂದ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ವಕ್ಫ್ ಜಿಲ್ಲಾಧಿಕಾರಿ ಸೋಲಿಹಾ ಗೊಲಅಂದಾಜ್ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಘಟಕದ ಕಾರ್ಯದರ್ಶಿ ಐ.ಪಿ. ಚಂದೂನವರ ಮಾತನಾಡಿ, 2018ರಲ್ಲಿ ನೋಂದಣಿ ಆಗಿರುವ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ 11 ಸದಸ್ಯರ ಅಂಜುಮನ್ ಏ-ಇಸ್ಲಾಂ ಕಮಿಟಿಯ ಅಧಿಕಾರ 2021ರಲ್ಲಿ ಮುಕ್ತಾಯಗೊಂಡಿದೆ. ಸರ್ಕಾರ ಕಮಿಟಿಗೆ ಆಡಳಿತಾಧಿಕಾರಿಯನ್ನು ನೇಮಿಸಿಲ್ಲ, ಚುನಾವಣೆ ಕೂಡ ನಡೆಸಿಲ್ಲ. ಅವ್ಯವಹಾರ, ಭ್ರಷ್ಟಾಚಾರದ ತಡೆಗೆ ಚುನಾವಣೆ ಜರುಗಿಸಬೇಕು ಎಂದು ಒತ್ತಾಯಿಸಿದರು.
ವಕ್ಫ್ ಇನ್‌ಸ್ಪೆಕ್ಟರ್ ತೌಸೀಫ್ ಅಹಮ್ಮದ್ ಮಕಾನದಾರ, ರಿಯಾಜ್ ಅಹ್ಮದ್ ನಾಲಬಂದ, ಇತರರಿದ್ದರು.