

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಭಕ್ತಿ, ಪ್ರೀತಿಯಿಂದ ಊರಿನ ಹತ್ತು ಸಮಸ್ತರು ಸೇರಿ ಭಕ್ತಿಯಿಂದ ನಿಧಿಕುಂಭ ಸಮರ್ಪಿಸಿದ್ದಾರೆ. ಸುಮೂಹುರ್ತದಲ್ಲಿ ನಿಧಿಕುಂಭದ ಸ್ಥಾಪನೆ ಆಗಿದೆಯೆಂದರೆ ಗರ್ಭಗುಡಿ ಸಮರ್ಥವಾಗುತ್ತದೆ. ಗರ್ಭಗುಡಿ ಸಮರ್ಥವಾದಾಗ ದೇವಸ್ಥಾನ ಸುಭದ್ರವಾಗುತ್ತದೆ ಎಂದು ಪಲಿವಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.
ಪುನರ್ ನಿರ್ವಾಣಗೊಳ್ಳುತ್ತಿರುವ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಉಪಸ್ಥಾನಾಧಿಪತಿ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ಶುಕ್ರವಾರ ನಿಧಿಕುಂಭ ಸ್ಥಾಪನೆ ವಾಡಿ ಆಶೀರ್ವಚನ ನೀಡಿದರು.
ದೇವಳದ ತಂತ್ರಿಗಳಾದ ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ಬಾಲಾಯದಲ್ಲಿ ಪ್ರಾರ್ಥನೆ ನಡೆದು ನಿಧಿಕುಂಭ ಸ್ಥಾಪನೆ ಧಾರ್ಮಿಕ ವಿಧಿಗಳು ಸಂಪನ್ನಗೊಂಡಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ, ದೇವಳ ಕಾರ್ಯನಿರ್ವಹಣಾಧಿಕಾರಿ ರಾಜಗೋಪಾಲ ಉಪಾಧ್ಯಾಯ, ಆನುವಂಶಿಕ ಮೊಕ್ತೇಸರ ಪಡುಬಿದ್ರಿ ಬೀಡು ರತ್ನಾಕರ ರಾಜ್ ಅರಸು ಕಿನ್ಯಕ್ಕ ಬಲ್ಲಾಳರು, ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ, ಕಂಬ್ಳಕಟ್ಟ ಶಿವರಾಜ ರಾಧಾಕೃಷ್ಣ ಉಪಾಧ್ಯಾಯ, ಅರ್ಚಕರಾದ ಪದ್ಮನಾಭ ಭಟ್, ಗುರುರಾಜ ಭಟ್, ಗಣಪತಿ ಭಟ್, ಗುಂಡಿಬೈಲು ಸುಬ್ರಹ್ಮಣ್ಯ ತಂತ್ರಿ, ಪಡುಬಿದ್ರಿ ಶ್ರೀ ಕೃಷ್ಣಾಪುರ ಶಾಖಾ ಮಠದ ಶ್ರೀನಿವಾಸ ಉಪಾಧ್ಯಾಯ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕೊರ್ನಾಯ ಪದ್ಮನಾಭ ರಾವ್, ಪ್ರಧಾನ ಕಾರ್ಯದರ್ಶಿ ರಾವೇಂದ್ರ ನಾವಡ, ಕಾರ್ಯದರ್ಶಿಗಳಾದ ಶ್ರೀನಾಥ್ ಹೆಗ್ಡೆ, ವೈ.ಸುಕುವಾರ್, ಉಪಾಧ್ಯಕ್ಷ ರವೀಂದ್ರನಾಥ ಜಿ.ಹೆಗ್ಡೆ, ವಾಜಿ ಸಚಿವ ವಿನಯಕುವಾರ್ ಸೊರಕೆ, ವಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಸಂತೋಷ್ ಶೆಟ್ಟಿ ಇನ್ನಾ, ನವೀನ್‌ಚಂದ್ರ ಜೆ.ಶೆಟ್ಟಿ, ನವೀನ್ ಎನ್.ಶೆಟ್ಟಿ, ವಿಷ್ಣುಮೂರ್ತಿ ಆಚಾರ್ಯ, ವೈ.ಎನ್.ರಾಮಚಂದ್ರ ರಾವ್, ರವಾಕಾಂತ ರಾವ್, ಲಕ್ಷ್ಮಣ, ಹರಿಕಷ್ಣ ರಾವ್, ಪಿ.ಕೆ.ಸದಾನಂದ, ವಿಶುಕುವಾರ್ ಶೆಟ್ಟಿಬಾಲ್, ಗುತ್ತಿನಾರ್ ಕೃಷ್ಣ ಶೆಟ್ಟಿ, ಬಗ್ಗೇಡಿಗುತ್ತು ಶೇಖರ ಶೆಟ್ಟಿ, ಅನಿಲ್ ಕುವಾರ್ ಶೆಟ್ಟಿ, ಮುರಳೀನಾಥ ಶೆಟ್ಟಿ, ಭಾಸ್ಕರ್ ಕೆ., ಸದಾಶಿವ ಪಡುಬಿದ್ರಿ, ಸುಕುವಾರ್ ಶ್ರೀಯಾನ್, ಅಶೋಕ್ ಸಾಲ್ಯಾನ್, ಸುಧಾ ನಾವಡ, ಗ್ರಾಮದ ಭಕ್ತರು, ದೇವಸ್ಥಾನ ಸಿಬ್ಬಂದಿ ಮತ್ತಿತರರಿದ್ದರು.