ಶ್ರೀಜಿಹ್ವೇಶ್ವರರ ಬೋಧನೆಗಿದೆ ಶಾಶ್ವತವಾದ ನೆಲೆ

Untitled-4
ಆನೇಕಲ್​ನ ಹಿರಿಯ ಪ್ರಾಥಮಿಕ ಶಾಲೆಯ ಮುನಿವೆಂಕಟಪ್ಪ ಸಭಾಂಗಣದಲ್ಲಿ ಭಾನುವಾರ ಭಗವಾನ್​ ಜಿಹ್ವೇಶ್ವರ ಜಯಂತಿ ಮತ್ತು ಜಿಹ್ವೇಶ್ವರರ ಮೂಲ ಸ್ತಂಭ ಸಾಲಿ ಮಹಾತ್ಮ ಪುರಾಣ ಗ್ರಂಥ ಲೋಕಾರ್ಪಣೆ ಮಾಡಲಾಯಿತು. ಸಾಹಿತಿ ಎಸ್​.ಜಗನ್ನಾಥರಾವ್​ ಬಹುಳೆ, ಕರ್ನಾಟಕ ರಾಜ್ಯದ ಸಾಳಿ ಸಮಾಜದ ರಾಜ್ಯಾಧ್ಯ ಚಂದ್ರಶೇಖರ ಭಂಡಾರೆ, ನಾಗನೂರು ಶ್ರೀ ಜಂಗಮ ಮಠದ ಶ್ರೀ ನಿರಂಜನ ಪ್ರಣವ ಸ್ವರೂಪಿ ಸಿದ್ದಲಿಂಗ ಸ್ವಾಮೀಜಿ ಇತರರು ಇದ್ದರು.
Published on

ಆನೇಕಲ್​ : ಸ್ವಕುಳ ಸಾಳಿ ಸಮಾಜದ ಮೂಲಪುರುಷ ಶಿವಪುತ್ರರು. ಕುಲಗುರುಗಳಾದ ಭಗವಾನ್​ ಶ್ರೀ ಜಿಹ್ವೇಶ್ವರರು ತಮ್ಮ ಜೀವನ ಬೋಧನೆಗಳ ಮೂಲಕ ಶಾಶ್ವತ ನೀತಿ ಸಂಹಿತೆ ಸಾರಿದ್ದಾರೆ. 6 ಶತಮಾನಗಳ ಬಳಿಕವೂ ಅವರ ಸ್ಮರಣೆ ಆಗುತ್ತಿರುವುದು ಮಾದರಿ ಎನಿಸಿದೆ ಎಂದು ಸಾಹಿತಿ ಎಸ್​.ಜಗನ್ನಾಥರಾವ್​ ಬಹುಳೆ ಅಭಿಪ್ರಾಯಪಟ್ಟರು.

ಆನೇಕಲ್​ನ ಹಿರಿಯ ಪ್ರಾಥಮಿಕ ಶಾಲೆಯ ಮುನಿವೆಂಕಟಪ್ಪ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಭಗವಾನ್​ ಜಿಹ್ವೇಶ್ವರ ಜಯಂತಿ ಮತ್ತು ಜಿಹ್ವೇಶ್ವರರ ಮೂಲ ಸ್ತಂಭ ಸಾಲಿ ಮಹಾತ್ಮ ಪುರಾಣ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಭಾವತ@ ಸಜ್ಜನಿಕೆಯ ಸ್ವಕುಳ ಸಾಳಿ ಸಮಾಜದವರ ನೆರವಿಗಾಗಿ ರೂಪಿಸಿರುವ ಅನೇಕ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಆನೇಕಲ್​ ಸ್ವಕುಳ ಸಾಳಿ ಸಮಾಜದ ಅಧ್ಯೆ ಡಾ.ವಿನುತಾ ರಾಜೇಶ್​ ಸಮಾರಂಭದ ಅಧ್ಯತೆ ವಹಿಸಿ, ಮಾತನಾಡಿ, ಜಿಹ್ವೇಶ್ವರ ಜಯಂತಿ ಪ್ರತಿಯೊಬ್ಬರ ಮನೆಯ ಹಬ್ಬವಾಗಬೇಕು ಮತ್ತು ಅವರ ಸಿದ್ಧಾಂತವನ್ನು ಅನುಚಾನವಾಗಿ ಅರಿತು ಆಚರಣೆ ಮಾಡಿದರೆ ಜಯಂತಿ ಅರ್ಥಪೂರ್ಣ ಎಂದು ಕರೆ ನೀಡಿದರು.

ನಾಗನೂರು ಶ್ರೀ ಜಂಗಮ ಮಠದ ಶ್ರೀ ನಿರಂಜನ ಪ್ರಣವ ಸ್ವರೂಪಿ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಜಾಲತಾಣಗಳ ಭರಾಟೆಯಲ್ಲಿ ಗೊಂದಲಗಳ ಗೂಡಾಗಿರುವ ಸಮಾಜಕ್ಕೆ ರ್ನಿದಿಷ್ಟ ಗುರಿಗಳು ಇಲ್ಲವಾಗಿದೆ. ಸಂಪ್ರದಾಯಗಳನ್ನು ಮರೆತಿರುವುದೇ ಇದಕ್ಕೆ ಮುಖ್ಯ ಕಾರಣ. ಜಿಹ್ವೇಶ್ವರ ಗುರುಗಳ ಜಯಂತಿ ಆಶಯ ಮಕ್ಕಳಿಗೆ ಮೊದಲು ತಲುಪಬೇಕಾಗಿದೆ. ನೀತಿ ರೀತಿಗಳನ್ನು ಗಿಡವಾಗಿದ್ದಾಗಲೇ ನೀರೆರೆದು ಪೋಷಿಸಬೇಕು. ಆಗ ಮಾತ್ರ ಸಂಯಮದ ಸಮಾಜ ನಿರೀಸಲು ಸಾಧ್ಯ ಎಂದು ಆಶಿಸಿದರು. ಶ್ರೀನಿವಾಸಮೂರ್ತಿ, ಮಲ್ಲಿಕಾರ್ಜುನ ಕಾಂಬಳೆ, ಗಿರಿಧರ ಕೆಂದೊಳೆ, ಗುರುನಾಥ ಪಣಿಬಾತೆ, ಾನದೇವ ವಂಜರೆ, ಶಿವರಾಂ ಸವಸೆರ್​, ಸ್ಥಳಿಯ ಬಿಜೆಪಿ ಮುಖಂಡ ಎಸ್​.ಕೆ.ಜಯದೇವ್​ ಇದ್ದರು. ಹೇಮಾ ಚಂದಾವರ್​ ಅವರು ವೀಣೆ ನುಡಿಸಿದರು. ಚಂದ್ರಶೇಖರ್​ ವಾಂಜಿರೆ ಮತ್ತು ಅನುಶ್ರೀ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net