

ವಿಜಯಪುರ:ಸಮಾಜದ ಬದಲಿಸುವ ಶಕ್ತಿ ಹೊಂದಿರುವ ಶಿಕ ವೃತ್ತಿಯು ಅತ್ಯಂತ ಪವಿತ್ರವಾದದ್ದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.
ನಗರದ ಕಸಾಪ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ರಾಂತ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ದಂಪತಿ ಹಾಗೂ ವಿಶ್ರಾಂತ ಶಿಕರಿಗೆ ಬಿಳ್ಕೋಡುವ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕರಿಗೆ ನಿವೃತ್ತಿಯ ನಂತರವೂ ಕೂಡ ವಿದ್ಯಾ ದಾನ ಮಾಡುವ ಆಶಯವಿರುತ್ತದೆ. ವಿಶ್ರಾಂತ ಜೀವನದಲ್ಲಿ ಸಾಹಿತ್ಯದ ಕಡೆಗೆ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು.
ಸನ್ಮಾನ ಸ್ವೀಕರಿಸಿದ ವಿಶ್ರಾಂತ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಮೂರು ವರ್ಷಗಳ ಕಾಲ ಮಾಡಿದ ಸೇವೆ ನನಗೆ ತೃಪ್ತಿ ತಂದಿದೆ. ಸಾಹಿತ್ಯ ಪರಿಷತ್ನ ಹಲವು ಕಾರ್ಯಕ್ರಮಗಳಿಗೆ ಆಹ್ವಾನಿಸಿ ಗೌರವ ನೀಡಿದ್ದನ್ನು ನಾನು ಎಂದಿಗೂ ಮರೆಯಲ್ಲ ಎಂದರು.
ತಹಸೀಲ್ದಾರ್ ಪ್ರಶಾಂತ ಚನಗೊಂಡ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಶ್ರಾಂತ ಶಿಕರಾದ ರವೀಂದ್ರ ಬೆಳ್ಳಿ, ಉಮಾ ಸಾಲಂಕಿ, ಸುಮಯ್ಯಬೇಗಂ ಪಠಾಣ, ಎಸ್.ಎಂ. ಕಾರಜೋಳ, ಎ.ಎಂ. ಮುಜಾವರ, ವಿಜಯಕುಮಾರ ಇಂಡಿ, ಎ.ಕೆ. ಬಾಗಾಯತ, ಎಂ.ಆರ್. ಬಡಿಗೇರ, ಸರಸ್ವತಿ ಕಟ್ಟಿಮನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಸಾಪ ಗೌರವ ಸಲಹೆಗಾರ ಡಾ. ವಿ.ಡಿ. ಐಹೊಳ್ಳಿ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಅಭಿಷೇಕ ಚಕ್ರವರ್ತಿ, ಶಿಲ್ಪಾ ಭಸ್ಮೆ, ಡಾ. ಆನಂದ ಕುಲಕರ್ಣಿ, ಕಮಲಾ ಮುರಾಳ, ವಿಜಯಲಕ್ಷಿ$್ಮ ಮಾರಿಹಾಳ, ಜಯಶ್ರೀ ಹಿರೇಮಠ, ಎ.ಎಚ್. ವಾಲಿಕಾರ, ಶಶಿಕಲಾ ನಾಯ್ಕೋಡಿ, ವಿಜಯಲಕ್ಷಿ$್ಮ ಹಳಕಟ್ಟಿ, ಪರವೀನ ಶೇಖ, ಶೋಭಾ ಬಡಿಗೇರ, ಲತಾ ಗುಂಡಿ, ಜಿ.ಎಸ್. ಬಳ್ಳೂರ, ಎ.ಡಿ. ಮುಲ್ಲಾ, ಕೆ.ಎಸ್. ಹಣಮಾಣಿ, ವಿ.ಎಸ್. ಖಾಡೆ ಮತ್ತಿತರರಿದ್ದರು.
ಫೋಟೋ : ಎಂಎಂ 5&8
ವಿಜಯಪುರ ಕಸಾಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸೋಮಲಿಂಗ ಗೆಣ್ಣೂರ, ಶಂಕರ ಮಾರಿಹಾಳ, ಹಾಸಿಂಪೀರ ವಾಲಿಕಾರ ಮತ್ತಿತರರಿದ್ದಾರೆ.
**