ಭ್ರಾತೃತ್ವದಿಂದ ಜೀವಿಸಲು ಕಲಿಸಿದ ಗುರು

ಹೂವಿನಹಡಗಲಿ ತಾಪಂ ಸಭಾಂಗಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮವನ್ನು ಶಾಸಕ ಕೃಷ್ಣನಾಯ್ಕ ಉದ್ಘಾಟಿಸಿದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ತಹಸೀಲ್ದಾರ್ ಸಂತೋಷ್‌ಕುಮಾರ್, ಆರ್ಯ ಈಡಿಗ ಸಮಾಜದ ತಾಲೂಕು ಅಧ್ಯಕ್ಷ ಮಾರುತಿ, ಜಿಲ್ಲಾಉಪಾಧ್ಯಕ್ಷ ಅಯ್ಯನಗೌಡ ಇತರರಿದ್ದರು.
ಹೂವಿನಹಡಗಲಿ ತಾಪಂ ಸಭಾಂಗಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮವನ್ನು ಶಾಸಕ ಕೃಷ್ಣನಾಯ್ಕ ಉದ್ಘಾಟಿಸಿದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ತಹಸೀಲ್ದಾರ್ ಸಂತೋಷ್‌ಕುಮಾರ್, ಆರ್ಯ ಈಡಿಗ ಸಮಾಜದ ತಾಲೂಕು ಅಧ್ಯಕ್ಷ ಮಾರುತಿ, ಜಿಲ್ಲಾಉಪಾಧ್ಯಕ್ಷ ಅಯ್ಯನಗೌಡ ಇತರರಿದ್ದರು.
Published on

ಹೂವಿನಹಡಗಲಿ: ಸಮಾಜದಲ್ಲಿ ಮೇಲು, ಕೀಳು ಎಂಬ ದ್ವೇಷದ ಗೋಡೆಗಳನ್ನು ಕಿತ್ತು ಹಾಕಿ ಭ್ರಾತೃತ್ವದಿಂದ ಜೀವಿಸಲು ಕಲಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಲೋಕಕ್ಕೆ ಗುರುವಾಗಿದ್ದಾರೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಆರ್ಯ ಈಡಿಗ ಸಮಾಜದಿಂದ ಮಂಗಳವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಧ್ಯಾತ್ಮಿಕ ದೀಕ್ಷೆ ಪಡೆದ ಗುರುಗಳು ಜನರಿಗೆ ಹತ್ತಿರವಾಗಿ ಜಾಗೃತಿ ಮೂಡಿಸಿದರು. ಕೆಳವರ್ಗದವರಿಗೆ ನಮ್ಮ ದೇವಾಲಯಗಳನ್ನು ನಾವೇ ಕಟ್ಟೋಣ, ನಮಗೆ ಈಳವ ಶಿವ ಬೇಕು ಎಂದು ಕೇರಳದಿಂದ ದಕ್ಷಿಣದ ಕರಾವಳಿಯವರೆಗೂ ಅನೇಕ ದೇವಸ್ಥಾನಗಳನ್ನು ಕಟ್ಟಿಸಿದ್ದಾರೆ ಎಂದರು.

ಪ್ರಾಧ್ಯಾಪಕ ಈಡಿಗರ ಅಶೋಕ ಮಾತನಾಡಿ, ನಾರಾಯಣ ಗುರುಗಳು ಜಾತಿ, ಮತ, ದೇವರು ಎಲ್ಲರಿಗೂ ಒಂದೇ ಎಂದು ಮನುಕುಲಕ್ಕೆ ಸಾರಿ ಮೌನಕ್ರಾಂತಿ ಮಾಡಿದ್ದಾರೆ. ಕೆಳವರ್ಗದವರಿಗೆ ಶಿಕ್ಷಣದ ಅರಿವು ಮೂಡಿಸಿ ಬದಲಾವಣೆಗಳ ಕುರಿತು ಬೋಧಿಸಿದ್ದಾರೆ. ಸರಳ ವಿವಾಹ ಪರಿಕಲ್ಪನೆ, ಆಡಂಬರ ರಹಿತ ಜೀವನಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು ಎಂದು ತಿಳಿಸಿದರು.

ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ತಹಸೀಲ್ದಾರ್ ಸಂತೋಷ್‌ಕುಮಾರ್, ತಾಪಂ ಇಒ ಪರಮೇಶ್ವರಪ್ಪ, ಪುರಸಭೆ ಅಧ್ಯಕ್ಷೆ ಜಮಾಲ್‌ಬಿ, ಆರ್ಯ ಈಡಿಗ ಸಮಾಜದ ತಾಲೂಕು ಅಧ್ಯಕ್ಷ ಮಾರುತಿ, ಜಿಲ್ಲಾಉಪಾಧ್ಯಕ್ಷ ಅಯ್ಯನಗೌಡ, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ತಾರಾಮತಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಐಗೋಳ ಚಿದಾನಂದ, ಪುರಸಭೆ ಉಪಾಧ್ಯಕ್ಷ ಮಂಜುನಾಥ, ಪ್ರಮುಖರಾದ ಈ.ಟಿ.ಲಿಂಗರಾಜ, ಮಲ್ಲಿಕಾರ್ಜುನ, ಹುಚ್ಚೆಂಗೆಪ್ಪ, ಪುತ್ರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net