ಶಿಷ್ಯನಿಗೆ ಗುರುವೇ ಸೃಷ್ಟಿಕರ್ತ

The teacher is the creator for the disciple.
ಕವಲಗಿ ಗ್ರಾಮದಲ್ಲಿರುವ ಸಂಗನಬಸವ ವಸತಿ ಪಿಯು ಕಾಲೇಜಿನಲ್ಲಿ ಆದರ್ಶ ಗುರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗುರು ಪೂರ್ಣಿಮೆ ಆಚರಿಸಲಾಯಿತು. ಹೇಮಂತ್​ ಕೃಷ್ಣ, ದೀಪಾ ಪಿರಡ್ಡಿ ಮತ್ತಿತರರಿದ್ದಾರೆ.
Published on

ವಿಜಯಪುರ : ವಿದ್ಯಾರ್ಥಿ ಜೀವನದಲ್ಲಿ ಗುರುವಿನ ಮಹತ್ವ ಅತ್ಯಮೂಲ್ಯವಾಗಿದೆ. ಶಿಲೆಗೆ ಶಿಲ್ಪಿ ಸೃಷ್ಟಿಕರ್ತನಾದರೆ, ಶಿಷ್ಯನಿಗೆ ಗುರುವೇ ಸೃಷ್ಟಿಕರ್ತ ಎಂದು ಪ್ರಾಚಾರ್ಯ ಹೇಮಂತ್​ ಕೃಷ್ಣ ಹೇಳಿದರು.

ತಾಲೂಕಿನ ಕವಲಗಿ ಗ್ರಾಮದಲ್ಲಿರುವ ಶ್ರೀ ಸಿದ್ಧೇಶ್ವರ ಸಂಸ್ಥೆಯ ಸಂಗನಬಸವ ವಸತಿ ಪಿಯು ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಆದರ್ಶ ಗುರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಕನ್ನಡ ಉಪನ್ಯಾಸಕಿ ದೀಪಾ ಪಿರಡ್ಡಿ ಮಾತನಾಡಿ, ಶಿಷ್ಯನಲ್ಲಿ ಶ್ರದ್ಧೆ ಇರಬೇಕು. ಗುರುವಿನಲ್ಲಿ ಪ್ರೇಮವಿರಬೇಕು. ಅವೆರಡು ಬೆರೆತಾಗ ಮಾತ್ರ ಶಿಷ್ಯ ಎಂತಹ ಗುರಿಯನ್ನಾದರೂ ಸಾಧಿಸಬಹುದು ಎಂದು ತಿಳಿಸಿದರು.

ವಿದ್ಯಾರ್ಥಿನಿ ಭಾಗ್ಯಶ್ರೀ ಚೌಕಿಮಠ ಗುರು ಪೂರ್ಣಿಮೆಯ ಮಹತ್ವ ತಿಳಿಸಿದರು. ತೇಜಸ್ವಿನಿ ಮೇತ್ರಿ ದೋಹೆ ಪ್ರಸ್ತುತ ಪಡಿಸಿದರು. ಲಕ್ಷಿ$್ಮ ಕಣಮುಚನಾಳ ತನಗೆ ಕಲಿಸಿದ ಗುರುಗಳ ಕುರಿತು ಮೆಲಕು ಹಾಕಿದರು. ನಂತರ ವಿದ್ಯಾರ್ಥಿಗಳಿಗೆ ಜ್ಞಾನಯೋಗಾಶ್ರಮದ ಪರಮ ಪೂಜ್ಯ ಸಿದ್ಧೇಶ್ವರ ಶ್ರೀಗಳ ಪ್ರೇರಣಾತ್ಮಕ ಅಮೃತವಾಣಿ ಕೇಳಿಸಲಾಯಿತು. ಮಹೆಕ್​ ಬನ್ನಟ್ಟಿ ನಿರೂಪಿಸಿದರು. ಬೃಂದಾ ಪವಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net