

ಪುತ್ತೂರು ಗ್ರಾಮಾಂತರ: ಪಕ್ಷ ಯಾವುದೇ ಇರಲಿ, ರಾಜಕೀಯ ಲಾಭದ ಉದ್ದೇಶ ಇದರಲ್ಲಿ ಇಲ್ಲ. ಸಮಾಜದಲ್ಲಿ ಸಮಸ್ಯೆಯಲ್ಲಿರುವ ಮಂದಿಗೆ ಸಹಾಯಮಾಡುವ ಮೂಲಕ ಸಮಾಜ ಕಟ್ಟುವುದೇ ಸಂಘದ ಉದ್ದೇಶವಾಗಿದೆ. ಯಾವುದೇ ಕಳಂಕವಿಲ್ಲದೆ ಸಮಾಜ ಕಟ್ಟುವ ಹಾಗೂ ಒಬ್ಬರಿಗೊಬ್ಬರು ಸಹಾಯ ಮಾಡುವ ಮೂಲಕ ಸಮಾಜ ಸಂಘಟನೆ ಬಲಿಷ್ಠಗೊಳಿಸುವ ಕೆಲಸ ಆಗಬೇಕು ಎಂದು ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು ಹೇಳಿದರು.
ಪಡುವನ್ನೂರು ಗ್ರಾಮದ ಕುದ್ಕಾಡಿ ಪುರಂದರ ರೈ ನಿವಾಸದಲ್ಲಿ ಪಡುವನ್ನೂರು ಗ್ರಾಮದ ಬಂಟ ಸಮುದಾಯದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಂಟರ ಮಾತೃ ಸಂಘ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದುರ್ಗಾಪ್ರಸಾದ್ ರೈ, ಸಹ ಸಂಚಾಲಕ ರಾಧಾಕೃಷ್ಣ ರೈ ಆಳ್ವ, ಬಂಟರ ಸಂಘದ ಪುತ್ತೂರು ತಾಲೂಕು ಮಾಜಿ ಅಧ್ಯಕ್ಷ ದಯಾನಂದ ರೈ ಮನವಳಿಕೆ ಮಾತನಾಡಿದರು. ಬಂಟರ ಸಂಘದ ಪಡುವನ್ನೂರು ಗ್ರಾಮ ಸಮಿತಿ ಅಧ್ಯಕ್ಷ ರವಿರಾಜ್ ರೈ, ಪುತ್ತೂರು ತಾಲೂಕು ಬಂಟರ ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ, ಯುವ ವಿಭಾಗದ ಅಧ್ಯಕ್ಷ ಹರ್ಷಕುಮಾರ್ ರೈ, ಮಾತೃ ಸಂಘದ ನಿರ್ದೇಶಕ ಜಯಪ್ರಕಾಶ್ ರೈ ನೂಜಿಬೈಲು, ಮಂಡಲ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಾಲಕೃಷ್ಣ ರೈ, ಸಂಘದ ನಿರ್ದೇಶಕರಾದ ನಯನಾ ರೈ, ಅರುಣಾ ದಿನಕರ್ ರೈ, ರಘುನಾಥ ರೈ ಮತ್ತು ಪುರದಂರ ರೈ ಉಪಸ್ಥಿತರಿದ್ದರು.
ಬಂಟರ ಸಂಘದ ಬಡಗನ್ನೂರು ವಲಯ ನಿರ್ದೇಶಕ ಸತೀಶ್ ರೈ ಕಟ್ಟಾವು ಸ್ವಾಗತಿಸಿ, ನಿರೂಪಿಸಿದರು. ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ವಂದಿಸಿದರು.
ಸಭೆಯಲ್ಲಿ ಬಂಟರ ಸಂಘದ ಪಡುವನ್ನೂರು ಗ್ರಾಮ ಸಮಿತಿ ರಚಿಸಲಾಯಿತು. ಅಧ್ಯಕ್ಷ-ರವಿರಾಜ್ ರೈ, ಕಾರ್ಯದರ್ಶಿ-ಶಶಿಧರ್ ರೈ ಕುತ್ಯಾಳ, ಕೋಶಾಧಿಕಾರಿ-ಪುರಂದರ ರೈ, ಉಪಾಧ್ಯಕ್ಷರಾಗಿ ರಾಜೇಶ್ ರೈ, ರಶ್ಮಿ ರಾಕೇಶ್ ರೈ ಕುದ್ಕಾಡಿ, ಸುರೇಶ್ ರೈ, ದಿನೇಶ್ ರೈ ಕುತ್ಯಾಳಕಾನ, ಸದಾನಂದ ರೈ, ಜ್ಯೋತಿ ಆರ್ತಿಕಜೆ, ಚಂದ್ರಶೇಖರ್ ಭಂಡಾರಿ, ಶಾಂಭವಿ ಜಿ.ಶೆಟ್ಟಿ ಕುದ್ಕಾಡಿ, ಗಂಗಾಧರ್ ರೈ, ಕೃಷ್ಣಪ್ರಸಾದ್ ರೈ ಪಡುಮಲೆ, ಸನತ್ ರೈ ಮೂಡಾಯೂರು, ಗೌರವ ಸಲಹೆಗಾರರಾಗಿ ಬಾಲಕೃಷ್ಣ ರೈ ಕುದ್ಕಾಡಿ, ಗಂಗಾಧರ್ ರೈ ಎಂ.ಜಿ, ಬಾಲಕೃಷ್ಣ ರೈ ಏರಾಜೆ, ಡಿ.ಪಿ.ರಾಧಾಕೃಷ್ಣ ರೈ, ಸದಾಶಿವ ರೈ ಪಲ್ಲತ್ತಾರು ಅವರನ್ನು ಆಯ್ಕೆ ಮಾಡಲಾಯಿತು.