ನಿತ್ಯ 11 ಸಾವಿರ ಟನ್​ ಕಬ್ಬು ನುರಿಸುವ ಗುರಿ

oplus_2
oplus_2
Published on

ನಿಪ್ಪಾಣಿ: ಹಾಲಸಿದ್ಧನಾಥ ಸಕ್ಕರೆ ಸಹಕಾರಿ ಕಾರ್ಖಾನೆ ಆಡಳಿತ ಮಂಡಳಿ ದಸರಾ ಮತ್ತು ದೀಪಾವಳಿ ಹಬ್ಬಕ್ಕಾಗಿ ಒಂದು ತಿಂಗಳ ಬೋನಸ್​ ನೀಡಲು ತೀರ್ಮಾನಿಸಿದ್ದು, 25 ವರ್ಷದಲ್ಲೇ ಗರಿಷ್ಠ ಬೋನಸ್​ ಆಗಿದೆ ಎಂದು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಭಾನುವಾರ ನಗರದ ಹೊರವಲಯದಲ್ಲಿರುವ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ 2025&26ನೇ ಸಾಲಿನ ಹಬೆಜನಕದ ಅಗ್ನಿ ಪ್ರದಿಪನ ಕಾರ್ಯ ನೆರವೇರಿಸಿ ಮಾತನಾಡಿದರು. ಪ್ರಸಕ್ತ ಹಂಗಾಮಿನಲ್ಲಿ 120ರಿಂದ 150 ದಿನ ಕಾರ್ಖಾನೆ ನಡೆಸುವ ಯೋಜನೆಯಿದ್ದು, ಪ್ರತಿದಿನ 11 ಸಾವಿರ ಟನ್​ ಕಬ್ಬು ನುರಿಸಿ 10 ಲ ಸಕ್ಕರೆ ಚೀಲ ಉತ್ಪಾದಿಸುವ ಗುರಿಯಿದೆ ಎಂದರು.

ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಕಾರ್ಖಾನೆ ಪ್ರಗತಿಪಥದಲ್ಲಿದ್ದು, ಹೆಚ್ಚಿನ ಕಬ್ಬು ಕಳುಹಿಸಿ ಬರುವ ಹಂಗಾಮು ಯಶಸ್ವಿಗೊಳಿಸಬೇಕು ಎಂದು ಬೆಳೆಗಾರರಿಗೆ ಮನವಿ ಮಾಡಿದರು. ಸಾನ್ನಿಧ್ಯ ವಹಿಸಿದ್ದ ನಿಡಸೋಸಿ ಸಿದ್ಧಸಂಸ್ಥಾನಮಠದ ಪಂಚಮ ಶಿವಲಿಂಗೇಶ್ವರ ಸ್ವಾಮಿಜಿ ಮಾತನಾಡಿ, ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ಆಮೂಲಾಗ್ರ ಸುಧಾರಣೆ ಆಗಿದೆ. ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಮಾರ್ಗದರ್ಶನದಲ್ಲಿ ಕಾರ್ಖಾನೆ ಪ್ರಗತಿಯ ದಿಕ್ಕಿನಲ್ಲಿದ್ದು, ಇನ್ನೂ ಅಭಿವೃದ್ಧಿಯಾಗಲೆಂದು ಹಾರೆಸಿದರು.

ಬೋನಸ್​ ೂಷಣೆಯಾಗುತ್ತಿದ್ದಂತೆ ಸಿಬ್ಬಂದಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕಾರ್ಖಾನೆ ಅಧ್ಯ ಮಲಗೊಂಡಾ ಪಾಟೀಲ, ಉಪಾಧ್ಯ ಪವನಕುಮಾರ ಪಾಟೀಲ, ನಿರ್ದೇಶಕರಾದ ಅಪ್ಪಾಸಾಹೇಬ ಜೊಲ್ಲೆ, ವಿಶ್ವನಾಥ ಕಮತೆೆ, ಅವಿನಾಶ ಪಾಟೀಲ, ಶ್ರೀಕಾಂತ ಬನ್ನೆ, ಜಯವಂತ ಭಾಟಲೆ, ರಾಮಗೊಂಡಾ ಪಾಟೀಲ, ಸುಕುಮಾರ ಪಾಟೀಲ, ಸಮಿತ ಸಾಸನೆ, ಜಯಕುಮಾರ ಖೋತ, ಪ್ರಕಾಶ ಶಿಂಧೆ, ಅನಿಲ ಶಿಂಧೆ ರಮೇಶ ಪಾಟೀಲ, ರಾವಸಾಹೇಬ ರಾಳೆ, ಶರದ ಜಂಗಟೆ, ಸುಹಾಸ ಗೂಗೆ, ಗೀತಾ ಪಾಟೀಲ, ವೆಶಾಲಿ ನಿಕಾಡೆ, ರಾಜು ಗುಂಡೇಶಾ, ಮಹಾಲಿಂಗ ಕೋಠಿವಾಲೆ, ಮಿಥುನ ಪಾಟೀಲ, ಸರ್ಜೇರಾವ ಪಾಟೀಲ, ಶ್ರೀಕಾಂತ ಕಣಗಲಿ, ಯೂನುಸ್​ ಮುಲ್ಲಾನಿ, ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ ಶಿರಗಾವೆ, ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆ ಅಧ್ಯ ಜ್ಯೋತಿಪ್ರಸಾದ ಜೊಲ್ಲೆ, ಕಿರಣ ನಿಕಾಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net