ಸೋರುತ್ತಿದೆ ತಾಲೂಕು ಸರ್ಕಾರಿ ಆಸ್ಪತ್ರೆ ಕಟ್ಟಡ

8 nrp 2.........
ಎನ್.ಆರ್.ಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮಳೆಯಿಂದ ಕಟ್ಟಡ ಸೋರುತ್ತಿರುವುದು.
Published on

ಎನ್.ಆರ್.ಪುರ: ಕ್ಷೇತ್ರದಲ್ಲಿ ಆರೋಗ್ಯ,ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಯಾವುದಕ್ಕೂ ಅನುದಾನದ ಕೊರತೆ ಇಲ್ಲ ಎಂದು ಹೇಳುತ್ತಿರುವ ಕ್ಷೇತ್ರದ ಶಾಸಕರ ಹೇಳಿಕೆ ಹಾಸ್ಯಾಸ್ಪದ ಎಂದು ತಾಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್ ಹೇಳಿದ್ದಾರೆ.
ಇಲ್ಲಿನ ಸರ್ಕಾರಿ ಆಸ್ಪತ್ರೆ ಕಟ್ಟಡ ಸೋರುತ್ತಿದ್ದು, ಹೊರರೋಗಿಗಳ ನೋಂದಣಿ ಮಾಡಿಸಲು ನಿಂತಾಗ ಮಳೆ ನೀರಿನಲ್ಲಿ ನೆನಯುವ ಸ್ಥಿತಿ ನಿರ್ಮಾಣವಾಗಿದೆ. ಆರ್‌ಸಿಸಿ ಕಟ್ಟಡದೊಳಗೇ ಮಳೆ ನೀರಿನಲ್ಲಿ ನೆನೆದು ನೋಂದಾಯಿಸ ಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇನ್ನೂ ವೈದ್ಯರ ಕೊಠಡಿ ಸಮೀಪ ಹೊರ ರೋಗಿಗಳಿಗೆ ಹಾಕಿರುವ ಆಸನದ ಮೇಲೂ ನೀರು ಬಿದ್ದು ರೋಗಿಗಳು ಕೂರವಂತಿಲ್ಲದಂತಾಗಿದೆ. ಆಸ್ಪತ್ರೆಯಲ್ಲಿ ಸ್ಥಿರ ದೂರವಾಣಿ ಸಂಪರ್ಕವಿಲ್ಲದೆ ಮೂರು ವರ್ಷವಾದರೂ ಶಾಸಕರು ಗಮನಹರಿಸಿಲ್ಲ. ಕ್ಷೇತ್ರದ ಶಾಸಕರು ಮಾತ್ರ ಈ ಬಾರಿ ನಮ್ಮದೇ ಕಾಂಗ್ರೆಸ್ ಸರ್ಕಾರವಿದ್ದು, ಅಭಿವೃದ್ಧಿಗೆ ಯಾರ ಅಡ್ಡಗಾಲೂ ಇಲ್ಲ. ಯಾವುದಕ್ಕೂ ಕೊರತೆ ಇಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದರೆ.
ಇಲ್ಲಿ ತಾಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆಮುಖ್ಯ ಕಟ್ಟಡವೇ ಸೋರುತ್ತಿದೆ. ಆಸ್ಪತ್ರೆಯಲ್ಲಿ ಉತ್ತಮ ವೈದ್ಯರಿದ್ದರೂ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಅವರಿಗೆ ಸರಿಯಾದ ವ್ಯವಸ್ಥೆ ಮಾಡಿಕೊಡಲು ಶಾಸಕರು ವಿಲರಾಗಿದ್ದಾರೆ ಎಂದು ದೂರಿದ್ದಾರೆ.
ಒಂದು ಸಾರ್ವಜನಿಕ ಆಸ್ಪತ್ರೆಯನ್ನೇ ಸುಸ್ಥಿತಿಯಲ್ಲಿಡದ ಶಾಸಕರು ಇನ್ನೇನು ಅಭಿವೃದ್ಧಿ ಮಾಡುತ್ತಾರೆ. ಬಂದ ಅನುದಾನ ಎಲ್ಲಿ ಹೋಗಿದೆ ಎಂದು ಶಾಸಕರು ಉತ್ತರಿಸಬೇಕು. ಕೂಡಲೇ ಶಾಸಕರು ಸರ್ಕಾರಿ ಆಸ್ಪತ್ರೆ ಕಟ್ಟಡ ದುರಸ್ತಿಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net