ಸಾಮಾನ್ಯವಾಗಿ ದೇಶದ ಜನರಿಗೆ ಯುದ್ಧವೆಂದರೆ ಅದೊಂದು ರೋಚಕ ಕ್ಷಣ. ತ್ಯಾಗ, ರೋಷ, ದೇಶಭಕ್ತಿ ಹಾಗೂ ಕರ್ತವ್ಯದ ಸಾರ ತುಂಬಿಕೊಂಡಿರುವ ಯುದ್ಧದ ಒಂದು ಸಣ್ಣ ವಸ್ತುವು ನಮ್ಮ ಕಣ್ಮುಂದೆ ನೋಡಲು ಸಿಕ್ಕರೆ ನಾವು ಅದಕ್ಕೆ ಮಹಾನ್ ಗೌರವ ಕೊಡುತ್ತೇವೆ. ಹೀಗೊಂದು ಸದಾವಕಾಶ ಈಗ ಮಂಗಳೂರಿನ ಜನರಿಗೆ ಒಲಿದಿದೆ. ಈ ಮೂಲಕ ಯುದ್ದ ಟ್ಯಾಂಕ್‌ಗೆ ಗೌರವ ಸಿಗುವ ಜತೆಗೆ ಯುವ ಮನಸ್ಸುಗಳಿಗೆ ಸೈನ್ಯಕ್ಕೆ ಸೇರುವ ಕಿಚ್ಚು ಹೆಚ್ಚಾಗಲಿ.