

ಸಂಕೇಶ್ವರ: ನಮ್ಮ ಸುತ್ತಮುತ್ತಲಿನ ಪರಿಸರ ಶುದ್ಧವಾಗಿದ್ದರೆ ಮಾತ್ರ ಆರೋಗ್ಯವಂತರಾಗಿರಲು ಸಾಧ್ಯ ಎಂದು ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಹಿರಿಯ ನಿರ್ದೇಶಕ ಶಿವನಾಯಿಕ ನಾಯಿಕ ಹೇಳಿದರು.
ಸ್ಥಳೀಯ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ವಿಶ್ವ ಪರಿಸರ ದಿನ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಮಳೆಗಾಲದಲ್ಲಿ ಕಾರ್ಖಾನೆಯ ಆಂತರಿಕ ವಲಯದಲ್ಲಿ ಸಾವಿರ ಸಸಿ ನೆಡುವ ಯೋಜನೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಕಾರ್ಖಾನೆ ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ನಿರ್ದೇಶಕ ಸೋಮಗೊಂಡ ಪಾಟೀಲ, ಪ್ರಭುದೇವ ಪಾಟೀಲ, ಬಸವರಾಜ ಮರಡಿ, ಮಹಾನಿಂಗ ಹಂಜಿ, ಸುರೇಶ ರಾಯಮಾನೆ, ಪವನ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ವೀರನಗೌಡ ದೇಸಾಯಿ, ರವೀಂದ್ರ ಚೌಗಲಾ, ಅಜಿತ ಚಾಟೆ, ಎಂ.ಆರ್. ಪಾಟೀಲ, ಭರತೇಶ ತೇರಣಿ, ಮಹಾದೇವಸ್ವಾಮಿ ಡಿ.ಎಸ್., ಕುಮಾರ ಪಾಟೀಲ, ಮಲ್ಲು ಪಾಟೀಲ, ವಿಶ್ವನಾಥ ಬೆಲ್ಲದ, ಬಿ.ಎಂ.ಪಾಟೀಲ, ಜಿ.ಐ.ಬೊಮ್ಮನ್ನವರ, ಸಂಜಯ ವಾಳಕಿ, ಮಹಾಂತೇಶ ಖೋತ, ಬಾಬಾಸಾಬ ನಾಗನೂರಿ, ಕಲ್ಲಪ್ಪ ಹೆಬ್ಬಾಳಿ, ರಾಜು ಇಂಗಳಿ, ಎಂ.ಬಿ.ದೇಸಾಯಿ ಇತರರಿದ್ದರು.