ಸುತ್ತೂರು ಕ್ಷೇತ್ರಕ್ಕಿದೆ ಸುದೀರ್ಘ ಇತಿಹಾಸ

30 Srt 01
Published on

ಶಿರಹಟ್ಟಿ: ಶರಣ ಸಾಹಿತ್ಯ ಪರಿಷತ್ ಹುಟ್ಟು ಹಾಕಿದವರು ಸುತ್ತೂರು ಕ್ಷೇತ್ರದ ಲಿಂ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು. 1986ರಿಂದ ಅವರ ಜನ್ಮ ದಿನವನ್ನು ವಚನ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಶರಣ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.

ತಾಲೂಕಿನ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆಯು ಸಿಸಿಎನ್ ಸರ್ಕಾರಿ ಪ್ರೌಢಶಾಲೆಯಲ್ಲಿ ಶರಣ ಸಾಹಿತ್ಯ ಪರಿಷತ್​ನ ಸಂಸ್ಥಾಪಕರ ದಿನದ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸುದೀರ್ಘ ಇತಿಹಾಸ ಹೊಂದಿರುವ ಸುತ್ತೂರು ಕ್ಷೇತ್ರ ಇಂದು ನಾಡಿನ ಪ್ರಮುಖ ಧಾರ್ವಿುಕ ಕೇಂದ್ರಗಳಲ್ಲಿ ಒಂದಾಗಿದೆ ಎಂದರು.

ತಮಿಳುನಾಡು, ಕೇರಳ, ಮಹಾರಾಷ್ಟ್ರ, ದೆಹಲಿ ಮತ್ತಿತರ ರಾಜ್ಯಗಳಲ್ಲಿ ಶರಣರ ತತ್ವ ಚಿಂತನೆಗಳನ್ನು ಮನೆ ಮನಗಳಿಗೆ ತಲುಪಿಸುವ ಕಾರ್ಯವನ್ನು ಶಸಾಪ ಮಾಡುತ್ತಿದೆ ಎಂದರು.

ಎಸ್​ಡಿಎಂಸಿ ಅಧ್ಯಕ್ಷರ ನಾಗರಾಜ ಲಕ್ಕುಂಡಿ ಉದ್ಘಾಟಿಸಿದರು. ಎಂ.ಕೆ. ಲಮಾಣಿ, ಎಚ್.ಎಂ. ದೇವಗಿರಿ. ಆರ್.ಬಿ. ಕಾಮತ್, ಬಸವರಾಜ ಬೋರಶೆಟ್ಟರ್, ಫಕೀರೇಶ ರಟ್ಟಿಹಳ್ಳಿ, ಎಸ್.ಆರ್. ಖವಾಸ್, ಪ್ರಿಯಾಂಕ ಉಮರ್ಜಿ, ಜಿ.ಡಿ. ಈರಕ್ಕನವರ, ಆರ್.ಎಂ. ಪೊಲೀಸ್ ಪಾಟೀಲ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net