ಸುಪ್ರೀಂಕೋರ್ಟ್ ತೀರ್ಪು ಹೋರಾಟಕ್ಕೆ ಸಂದ ಜಯ

2KDR3
ತಾಲೂಕು ಮಾದಿಗ ಸಮಾಜಗ ಮುಖಂಡುಗಳು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಮಾಲೆ ಹಾಕಿ, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಮುಖಂಡರಾದ ಶೂದ್ರ ಶ್ರೀನಿವಾಸ್, ಶಂಕರ್,ಎನ್.ಗಿರೀಶ್, ಮಲ್ಲಿಕಾರ್ಜುನ್, ಚಿಕ್ಕಿಂಗಳ ಲಕ್ಷ್ಮಣ್, ವೈ.ಟಿ.ಗೋವಿಂದಪ್ಪ, ಡಿ. ಪ್ರಶಾಂತ್ ಇದ್ದರು.
Published on

ಕಡೂರು: ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಸಮರ್ಥನೀಯ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದು ಹೋರಾಟಗಾರರಿಗೆ ತಂದ ಐತಿಹಾಸಿಕ ಜಯ ಎಂದು ಮಾದಿಗ ಸಮಾಜದ ಮುಖಂಡ ಶೂದ್ರ ಶ್ರೀನಿವಾಸ್ ತಿಳಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿಯಲ್ಲಿ ಉಪ ವರ್ಗ ರಚಿಸಿ ದಮನಿತ ಸಮುದಾಯಗಳಿಗೆ ಕೋಟಾ ಕಲ್ಪಿಸಲು ರಾಜ್ಯಗಳಿಗೆ ಅಧಿಕಾರ ನೀಡಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿ ತಾಲೂಕು ಮಾದಿಗ ಸಮಾಜದ ಮುಖಂಡರು ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ವಿಜಯೋತ್ಸವ ಆಚರಿಸಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿ ಮಾತನಾಡಿದರು.
ಸುಪ್ರೀಂ ಕೋರ್ಟ್ ತೀರ್ಪಿನಿಂದ ದಮನಿತರ ಪರವಾಗಿ ಒಳಮೀಸಲಾತಿ ಕಲ್ಪಿಸಲು ರಾಜ್ಯಗಳಿಗೆ ಅಧಿಕಾರ ದೊರೆತಿದೆ. ಇದು ಹೋರಾಟಗಾರರ ತ್ಯಾಗಕ್ಕೆ ಸಿಕ್ಕ ಜಯವಾಗಿದೆ. ಸರ್ವರಿಗೂ ಸಮಪಾಲು ಸಮಬಾಳು ಎಂಬ ಪರಿಕಲ್ಪನೆ ಮೇರೆಗೆ ಎಲ್ಲರಿಗೂ ಇದರ ಲಾಭ ದೊರೆಯಲಿದೆ ಎಂದರು.
ರಾಜ್ಯ ಮಾದಿಗ ಮೀಸಲಾತಿ ಹೋರಾಟ ಸಮಿತಿ ಕಾರ್ಯದರ್ಶಿ ಬಿ.ಟಿ.ಚಂದ್ರಶೇಖರ್ ಮಾತನಾಡಿ ,ರಾಜ್ಯ ಸರ್ಕಾರಗಳು ತಕ್ಷಣ ಸುಪ್ರೀಂಕೋರ್ಟ್ ತೀರ್ಪನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಸಂವಿಧಾನದ ಆಶಯ ಮತ್ತು ಮೂಲ ತತ್ವಗಳನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ಸಮಾನ ಅವಕಾಶ ಕಲ್ಪಿಸಿಕೊಡಬೇಕು ಎಂದರು.
ಸಮಾಜದ ಮುಖಂಡ ಕೆ.ಎಸ್.ಶಂಕರ್ ಮಾತನಾಡಿ, ಒಳ ಮೀಸಲಾತಿ ಎತ್ತಿ ಹಿಡಿಯುವ ಮೂಲಕ ಸುಪ್ರೀಂಕೋರ್ಟ್ ಸಾಮಾಜಿಕ ನ್ಯಾಯಕ್ಕೆ ಅಭೂತಪೂರ್ವ ಗೆಲುವು ದೊರೆಯುವಂತೆ ಮಾಡಿದೆ ಎಂದರು. ಸಮಾಜದ ಮುಖಂಡರಾದ ಬಿ.ಎನ್.ಮಲ್ಲಿಕಾರ್ಜುನ್, ಎನ್.ಮಂಜಪ್ಪ, ಶ್ರೀಕಾಂತ್, ಸುರೇಶ್, ಸಗುನಪ್ಪ, ಮಲ್ಲೇಶ್ವರದ ತಿಮ್ಮಣ್ಣ, ರಾಮಚಂದ್ರಪ್ಪ, ಲಕ್ಷ್ಮಣ್ ಚಿಕ್ಕಿಂಗಳ ಲಕ್ಷ್ಮಣ್, ವೈ.ಟಿ.ಗೋವಿಂದಪ್ಪ, ಡಿ.ಪ್ರಶಾಂತ್, ಎನ್.ಗಿರೀಶ್, ಹುಲ್ಲೇಹಳ್ಳಿ ಲಕ್ಷ್ಮಣ್, ಬಿ.ಜಿ.ಮೈಲಾರಪ್ಪ, ಕೃಷ್ಣಪ್ಪ, ಗಂಗರಾಜು, ಚಂದ್ರಪ್ಪ, ಪ್ರಸನ್ನ, ಶ್ರೀನಿವಾಸ್, ರಾಘವೇಂದ್ರ, ವಿನೋದ್,ಬಸವರಾಜ್, ಜಯಣ್ಣ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net