

ವಿಜಯವಾಣಿ ಸುದ್ದಿಜಾಲ ಬೆಳ್ವೆ
ದೇವರ ಇಚ್ಛೆ, ಭಕ್ತರ ಸಂಕಲ್ಪಗಳು ಒಂದಾದಾಗ ದೇವತಾ ಕಾರ್ಯಗಳು ಸಾಂಗವಾಗಿ ನಡೆಯುತ್ತವೆ. ಶ್ರದ್ಧೆ, ಭಕ್ತಿ, ಪರಿಶುದ್ಧ ಮನಸ್ಸಿನಿಂದ ಮಾಡುವ ಧಾರ್ಮಿಕ ಕಾರ್ಯಗಳಿಂದ ಯಶಸ್ಸು ಸಾಧ್ಯವಿದೆ ಎಂದು ರಮೇಶ ಬಾಯರಿ ವಂಡಾರು ಹೇಳಿದರು.
ಬೆಳ್ವೆ ಸಮೀಪದ ಮರೂರು ಶ್ರೀದುರ್ಗಾಪರಮೇಶ್ವರಿ ದೇವಳದಲ್ಲಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಟ್ರಸ್ಟ್ ವತಿಯಿಂದ ಅ.10ರಿಂದ ಅ.14ರ ತನಕ ನಡೆಯಲಿರುವ ಶತಚಂಡಿಕಾ ಯಾಗದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ರೇವತಿ ರಮೇಶ ಬಾಯರಿ ವಂಡಾರು, ಅನನ್ಯಾ ಬಾಯರಿ, ಕರ್ಣಾಟಕ ಬ್ಯಾಂಕ್ ನಿರ್ದೇಶಕ ಎಸ್.ಬಾಲಕೃಷ್ಣ ಅಲ್ಸೆ ಸೆಟ್ಟೋಳಿ, ಮರೂರು ಶ್ರೀ ದುರ್ಗಾಪರಮೇಶ್ವರಿ ದೇವಳದ ಪ್ರಧಾನ ಅರ್ಚಕ ಶ್ರೀನಿವಾಸ ಬಾಯರಿ, ಅರ್ಚಕ ಶ್ರೀಧರ ಬಾಯರಿ, ನಿರಂಜನ ಬಾಯರಿ, ಮರೂರು ಶ್ರೀ ದುರ್ಗಾಪರಮೇಶ್ವರಿ ದೇವಳದ ಅಧ್ಯಕ್ಷ ವೈ.ಬಾಲಕೃಷ್ಣ ಭಟ್, ಕಾರ್ಯದರ್ಶಿ ಎಂ.ಸತ್ಯನಾರಾಯಣ ಹೆಬ್ಬಾರ್, ವೈ.ಪಟ್ಟಾಭಿರಾಮ್ ಭಟ್, ಉದಯಕುಮಾರ್ ಭಟ್, ಡಾ.ರಂಗನಾಥ, ಕೃಷ್ಣರಾಜ ಶ್ಯಾನುಭಾಗ್, ನಾಗರಾಜ ಹೆಬ್ಬಾರ್, ಬೆಳ್ವೆ ಶ್ರೀ ಶಂಕರನಾರಾಯಣ ದೇವಳದ ಮೊಕ್ತೇಸರ ಬಿ.ಶಂಕರ ಶೆಟ್ಟಿ, ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೆ.ಸಂಜೀವ ಆರ್ಡಿ, ಮರೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಟ್ರಸ್ಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ರೀನಿವಾಸ ಬಾಯರಿ ಸ್ವಾಗತಿಸಿದರು. ಎಂ.ಸತ್ಯನಾರಾಯಣ ಹೆಬ್ಬಾರ್ ವಂದಿಸಿದರು.