ಆಸಕ್ತಿಯಿಂದ ಸರಳವಾಗಲಿದೆ ವಿಷಯ

ಕಂಪ್ಲಿ ತಾಲೂಕಿನ ಕಣವಿ ತಿಮ್ಮಲಾಪುರದ ಸಹಿಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ವಿಜ್ಞಾನದ ಮಾದರಿಗಳನ್ನು ಪ್ರದರ್ಶಿಸಿದರು.
ಕಂಪ್ಲಿ ತಾಲೂಕಿನ ಕಣವಿ ತಿಮ್ಮಲಾಪುರದ ಸಹಿಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ವಿಜ್ಞಾನದ ಮಾದರಿಗಳನ್ನು ಪ್ರದರ್ಶಿಸಿದರು.
Published on

ಕಂಪ್ಲಿ: ನಿತ್ಯ ಬಳಕೆ ವಸ್ತುಗಳ ಕಾರ್ಯವಿಧಾನದ ವೈಜ್ಞಾನಿಕ ಮಾಹಿತಿ ತಿಳಿಯುವಲ್ಲಿ ವಿದ್ಯಾರ್ಥಿಗಳು ಆಸಕ್ತಿ ತೋರಬೇಕು ಎಂದು ಇಸಿಒ ಜಿ.ವೀರೇಶ್ ಹೇಳಿದರು.

ಕಣವಿ ತಿಮ್ಮಲಾಪುರ ಸಹಿಪ್ರಾ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಲಿಕೆಯ ಮೊದಲ ಹಂತದಲ್ಲಿಯೇ ವಿಜ್ಞಾನದ ಕುರಿತು ಆಸಕ್ತಿ ಬೆಳೆಸಿಕೊಂಡರೆ ವಿಷಯ ಸರಳವಾಗುತ್ತದೆ ಎಂದು ಸಲಹೆ ನೀಡಿದರು.

ವಿಜ್ಞಾನ ವಿಷಯದ ಶಿಕ್ಷಕಿ ಪಾರ್ವತಿ ಮಾತನಾಡಿ, ಅಭಿವೃದ್ಧಿಯಲ್ಲಿ ವಿಜ್ಞಾನ-ತಂತ್ರಜ್ಞಾನದ ಪಾತ್ರ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ವಿಜ್ಞಾನದತ್ತ ಹೆಚ್ಚಿನ ಒಲುವು ತೋರಬೇಕಿದೆ ಎಂದರು. 60ಕ್ಕೂ ಹೆಚ್ಚು ವಿಜ್ಞಾನ, ಗಣಿತ ಮಾದರಿಗಳನ್ನು ಪ್ರದರ್ಶಿಸಲಾಯಿತು. ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಚ್.ದೊಡ್ಡಬಸಪ್ಪ, ಶಿಕ್ಷಕರಾದ ಕೆ.ಆರ್.ಮುರುಳಿಧರ್, ಎನ್.ವಿಶ್ವನಾಥ, ಮಹಾದೇವಿ, ಪಂಪಾಪತಿ, ಅಶ್ವಿನಿ, ಪ್ರಮುಖರಾದ ಎನ್.ವೆಂಕಟೇಶ, ಮಹಾದೇವ, ಡಂಗಿ ಪಂಪಾಪತಿ, ಸಣ್ಣ ವೆಂಕಟೇಶ, ಪಕ್ಕೀರಪ್ಪ, ಇತರರಿದ್ದರು.

ಬೆಳಗೋಡಹಾಳ: ಸಹಿಪ್ರಾ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯಶಿಕ್ಷಕ ಟಿ.ಎಚ್.ಮರಿಸ್ವಾಮಿ, ಶಿಕ್ಷಕರಾದ ತಿಪ್ಪಮ್ಮ ಶಂಕರಮೂರ್ತಿ ವೀರೇಶ, ಸಾವಿತ್ರಿ, ಮಂಗಳಾ, ಲೇಪಾಕ್ಷಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net