ವಿಪ್ರ ಸಮುದಾಯದ ಒಳಪಂಗಡಗಳು ಒಗ್ಗೂಡಬೇಕು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಎನ್.ಎಂ ನವೀನ್‌ಕುಮಾರ್

15
Published on

ಮೈಸೂರು: ವಿಪ್ರ ಸಮುದಾಯದ ಒಳಪಂಗಡಗಳು ಒಗ್ಗೂಡಿದರೆ ಮಾತ್ರ ಸಂಘಟನೆಗೆ ಬಲ ದೊರಕುತ್ತದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಎನ್.ಎಂ ನವೀನ್‌ಕುಮಾರ್ ಹೇಳಿದರು.

ಮೈಸೂರು ಬ್ರಾಹ್ಮಣ ಯುವ ವೇದಿಕೆಯಿಂದ ಕಾಳಿದಾಸ ರಸ್ತೆಯಲ್ಲಿರುವ ಶ್ರೀಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನೂತನ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಿ ಅವರು ಮಾತನಾಡಿದರು.

ತ್ರಿಮತಸ್ಥ ಬ್ರಾಹ್ಮಣರು ಒಂದಾಗಬೇಕು. ಸಂಘಟನಾತ್ಮಕವಾಗಿ ನಾವು ಒಗ್ಗೂಡಿದರೆ ಮಾತ್ರ ಬ್ರಾಹ್ಮಣ ಸಮುದಾಯ ಬೇರು ಮಟ್ಟದದಲ್ಲಿ ಬಲಿಷ್ಠಗೊಳ್ಳಲಿದೆ ಎಂದವರು ಅಭಿಪ್ರಾಯಪಟ್ಟರು.

ವಿಪ್ರರೆಲ್ಲರೂ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ದೇಶದ ಉಳಿದೆಲ್ಲ ಸಮುದಾಯಗಳಿಗೆ ಮಾದರಿಯಾಗಿ ನಮ್ಮ ಮೂಲ ಸಂಸ್ಕಾರ, ಸಂಸ್ಕೃತಿಯನ್ನು ಕಾಪಾಡಿ ಕೊಳ್ಳಬೇಕು. ಅವುಗಳನ್ನು ಉಜ್ವಲಗೊಳಿಸುವಲ್ಲಿ ಮುಂದಾಗಬೇಕು. ಈ ನಿಟ್ಟಿನಲ್ಲಿ ಸಂಘಟನೆ, ಮಹಾಸಭಾದ ಕಾರ್ಯಕ್ರಮಗಳಲ್ಲಿ ಎಲ್ಲರೂ ಸಕ್ರಿಯರಾಗಿ

ಭಾಗವಹಿಸುವುದು ಬಹು ಮುಖ್ಯ ಎಂದರು.

ನಗರಪಾಲಿಕೆ ಮಾಜಿ ಸದಸ್ಯ ಮಾ.ವಿ. ರಾಮಪ್ರಸಾದ್ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರು ಸರ್ಕಾರದ ಸವಲತ್ತು ಬಳಸಿಕೊಳ್ಳಬೇಕಾದರೆ ಸಂಘಟನಾತ್ಮಕವಾಗಿ ಸಂಘ ಸಂಸ್ಥೆಗಳ ಸಂಪರ್ಕದಲ್ಲಿರಬೇಕು. ಶಿಕ್ಷಣ, ಉದ್ಯೋಗ, ವೈದ್ಯಕೀಯ, ಸಾಂಸ್ಕೃತಿಕ ಸೇರಿದಂತೆ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರದ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಸಲಹೆ ನೀಡಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮತ್ತೊಬ್ಬ ಉಪಾಧ್ಯಕ್ಷ ಅನಿಲ್ ಕುಮಾರ, ಸಂಘಟನಾ ಕಾರ್ಯದರ್ಶಿ ಡಾ. ಲಕ್ಷ್ಮೀದೇವಿ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಎಚ್.ಎನ್. ಶ್ರೀಧರ ಮೂರ್ತಿ, ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಪ್ರಮುಖರಾದ ಸೌಭಾಗ್ಯಾ ಮೂರ್ತಿ, ಪುಷ್ಪಾ ಅಯ್ಯಂಗಾರ್, ಯೋಗಾನರಸಿಂಹ (ಮುರಳಿ), ಕೆ.ಎಂ. ನಿಶಾಂತ್, ಸುಚೇಂದ್ರ, ಶಾಂತಮ್ಮ, ವನಜಾ, ಮಹೇಶ್‌ಕಾಮತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net