ತಂಗಳು ಆಹಾರ ಸೇವಿಸಿದ ವಿದ್ಯಾರ್ಥಿನಿಯರು ಅಸ್ವಸ್ಥರಾಗಿ ಆಸ್ಪತ್ರೆಗೆ

Published on

ಸಕಲೇಶಪುರ: ಪಟ್ಟಣದ ಮೆಟ್ರಿಕ್ ನಂತರದ ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ಭಾನುವಾರ ರಾತ್ರಿ ಉಳಿದಿದ್ದ ಅನ್ನವನ್ನು ಸೋಮವಾರ ಬೆಳಗ್ಗೆ ತಿಂದ ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ.

ಪಟ್ಟಣದ ಹೊಸ ಬಸ್ ನಿಲ್ದಾಣ ಸಮೀಪದ ಹಾಸ್ಟೆಲ್‌ನಲ್ಲಿ ಸೋಮವಾರ ಬೆಳಗ್ಗೆ ಉಪಾಹಾರ ಸಿದ್ಧಪಡಿಸಲು ಅಡುಗೆ ಅನಿಲ ಖಾಲಿಯಾದ ಕಾರಣ ವಸತಿ ನಿಲಯದ ಕೆಲವು ವಿದ್ಯಾರ್ಥಿಗಳು ರಾತ್ರಿ ಉಳಿದಿದ್ದ ಅನ್ನ-ಸಾಂಬಾರ್ ತಿಂದಿದ್ದಾರೆ. ಇದರಿಂದ ನಸಿರ್ಂಗ್ ವಿದ್ಯಾರ್ಥಿಗಳಾದ ಚಂದನಾ, ಮೋನಿಕಾ, ರೇಣುಕಾ, ಚೇತನಾ ಎಂಬ ವಿದ್ಯಾರ್ಥಿನಿಯರು ಊಟ ಸೇವಿಸಿದ ಕೆಲವೇ ನಿಮಿಷಗಳಲ್ಲಿ ಕುಸಿದುಬಿದ್ದಿದ್ದಾರೆ. ಅಸ್ವಸ್ಥರಾದವರನ್ನು ತಕ್ಷಣವೇ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net