ಪಿಂಚಣಿ ನೀಡುವವರೆಗೂ ಹೋರಾಟ ನಿಲ್ಲಲ್ಲ

ILK 1-2 R
ಇಳಕಲ್ಲದ ವಿಜಯ ಮಹಾಂತೇಶ್ವರ ಮಠದ ದಾಸೋಹ ಭವನದಲ್ಲಿ ಇ.ಪಿ.ಎಸ್.95 ಪಿಂಚಣಿದಾರರು ಹಮ್ಮಿಕೊಂಡಿದ್ದ ಬೃಹತ್ ಸಮಾವೇಶವನ್ನು ರಾಷ್ಟ್ರೀಯ ಎನ್.ಎ.ಸಿ. ಅಧ್ಯಕ್ಷ ಕಮಾಂಡರ್ ಅಶೋಕ ರಾವುತ್ ಉದ್ಘಾಟಿಸಿದರು. ರಾಷ್ಟ್ರೀಯ ಸಂಚಾಲಕ ರಮಾಕಾಂತ, ಮಹಿಳಾ ಘಟಕದ ಅಧ್ಯಕ್ಷ ಶುಭಾ ಅರಸ್, ಸರಿತಾ ನರ‌್ಖೇಡೆ, ಬಿ.ಎಸ್. ನರ‌್ಖೇಡೆ, ಹುಚ್ಚಪ್ಪ ಇತರರಿದ್ದರು.
Published on

ಇಳಕಲ್ಲ.(ಗ್ರಾ): ಸರ್ಕಾರ ಪಿಂಚಣಿ ನೀಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ರಾಷ್ಟ್ರೀಯ ಎನ್.ಎ.ಸಿ. ಅಧ್ಯಕ್ಷ ಕಮಾಂಡರ್ ಅಶೋಕ್ ರಾವುತ್ ಹೇಳಿದರು.

ನಗರದ ವಿಜಯ ಮಹಾಂತೇಶ್ವರ ಮಠದ ದಾಸೋಹ ಭವನದಲ್ಲಿ ರಾಷ್ಟ್ರೀಯ ಸಂಘರ್ಷ ಸಮಿತಿ ಕರ್ನಾಟಕ ಮತ್ತು ಬಾಗಲಕೋಟೆ ಜಿಲ್ಲಾ ಘಟಕ, ಕೆಎಸ್‌ಆರ್‌ಟಿಸಿ ಮತ್ತು ಇತರ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಇಪಿಎಸ್ 95 ಪಿಂಚಣಿದಾರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಗೌರವಿತ ಪಿಂಚಣಿ ದೊರಕುವಲ್ಲಿ ಕಳೆದ 10 ವರ್ಷಗಳಿಂದಲೂ ಹೋರಾಟ ಮಾಡುತ್ತ ಬಂದಿದ್ದೇವೆ ಎಂದು ತಿಳಿಸಿದರು.

ರಾಷ್ಟ್ರೀಯ ಸಂಚಾಲಕ ರಮಾಕಾಂತ ನರಗುಂದ ಮಾತನಾಡಿ, ನೌಕರರ ಪಿಂಚಣಿ ಭಿಕ್ಷೆಯಲ್ಲ, ಗೌರವ ಎಂಬ ವಿಚಾರವನ್ನು ಅವರ ಮನಸ್ಸಿನಲ್ಲಿ ನಾಟುವಂತೆ ಮಾಡಬೇಕು. ಲಕ್ಷಾಂತರ ಪಿಂಚಣಿದಾರರಿದ್ದು ಅವರಿಗೆಲ್ಲ ನ್ಯಾಯ ದೊರಕಿಸುವುದು ನಮ್ಮ ಸಮಿತಿ ಮುಖ್ಯ ಉದ್ದೇಶ ಎಂದರು.

ಮಹಿಳಾ ಘಟಕದ ಅಧ್ಯಕ್ಷ ಶುಭಾ ಅರಸ್, ಸರಿತಾ ನರ‌್ಖೇಡೆ, ಬಿ.ಎಸ್. ನರ‌್ಖೇಡೆ, ಹುಚ್ಚಪ್ಪ, ವೀರಕುಮಾರ ಗಡಾದ, ವೀರಭದ್ರಪ್ಪ, ಎನ್.ಎ.ಸಿ. ಬಾಗಲಕೋಟೆ ಜಿಲ್ಲಾ ಅಧ್ಯಕ್ಷ ಎಂ.ವಿ. ಸಿಂದಗಿ, ವಿಜಯಪುರ ಜಿಲ್ಲಾಧ್ಯಕ್ಷ ಜೆ.ಎಸ್. ಗೌಡರ, ಚನ್ನಬಸಪ್ಪ ಇತರರಿದ್ದರು.

ಅಗಲಿದ ಪಿಂಚಣಿದಾರರಿಗೆ ಎರಡು ನಿಮಿಷ ಮೌನ ಆಚರಿಸಲಾಯಿತು. ಮಖಾಂದಾರ ಪ್ರಾರ್ಥಿಸಿದರು. ಎಸ್. ಪಿ. ಅಂಗಡಿ ಸ್ವಾಗತಿಸಿದರು. ಗುಂಡಪ್ಪ ತೊಂತನಾಳ ಪರಿಚಯಸಿದರು. ರಮೇಶ ಅಂಗಡಿ ನಿರೂಪಿಸಿದರು. ಸಿದ್ದಣ್ಣ ಹಾದಿಮನಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net