ಕಾರ್ಮಿಕ ವರ್ಗದ ಹೋರಾಟವನ್ನು ಗಟ್ಟಿಗೊಳಿಸಬೇಕು

oplus_1024
ರಾಯಚೂರಿನ ಆಶಾಪುರ ರಸ್ತೆಯಲ್ಲಿ ನೂತನವಾಗಿ ಟಿಯುಸಿಐ ರಾಜ್ಯ ಕಾರ್ಯಾಲಯ ಮಾರ್ಕ್ಸ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಸಿ ಆರ್.ಮಾನಸಯ್ಯ ಮಾತನಾಡಿದರು. ರಾಜ್ಯ ಉಪಾಧ್ಯಕ್ಷ ಎಂ.ಗಂಗಾಧರ, ಜಿಲ್ಲಾಧ್ಯಕ್ಷ ಜಿ.ಅಮರೇಶ, ಖಜಾಂಚಿ ಡಿ.ಕೆ.ಲಿಂಗಸುಗೂರು ಇದ್ದರು.
Published on

ರಾಯಚೂರು: ಕಾರ್ಮಿಕರನ್ನು ಒಗ್ಗೂಡಿಸುವ ಮೂಲಕ ಕಾರ್ಮಿಕ ವರ್ಗದ ಹೋರಾಟಗಳನ್ನು ಗಟ್ಟಿಗೊಳಿಸಬೇಕಾಗಿದೆ ಎಂದು ಟಿಯುಸಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಮಾನಸಯ್ಯ ಹೇಳಿದರು.
ಸ್ಥಳೀಯ ಆಶಾಪುರ ರಸ್ತೆಯಲ್ಲಿ ಟಿಯುಸಿಐ ರಾಜ್ಯ ಕಾರ್ಯಾಲಯ ಮಾರ್ಕ್ಸ್ ಭವನವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ಕಾರ್ಮಿಕ ಚಳುವಳಿಗಳನ್ನು ಸಲಗೊಳಿಸುವ ನಿಟ್ಟಿನಲ್ಲಿ ಸಂಘರ್ಷವನ್ನು ತೀವ್ರಗೊಳಿಸಲು ಕ್ರಿಯಾಶೀಲತೆಯಿಂದ ಮುಂದುವರಿಯಬೇಕು ಎಂದರು.
ರಾಜ್ಯ ಉಪಾಧ್ಯಕ್ಷ ಎಂ.ಗಂಗಾಧರ ಮಾತನಾಡಿ, ದುಡಿಯುವ ವರ್ಗದ ಸಿದ್ಧಾಂತವನ್ನು ಮೂಲವಾಗಿಟ್ಟುಕೊಂಡು ಆರಂಭಿಸಲಾಗಿರುವ ಮಾರ್ಕ್ಸ್ ಭವನದ ಮೂಲಕ ರಾಜ್ಯಾದ್ಯಂತ ಕಾರ್ಮಿಕ ಚಳುವಳಿ ಮುನ್ನಡೆಸಲು ಸನ್ನದ್ಧರಾಗೋಣ ಎಂದು ಹೇಳಿದರು.
ಖಜಾಂಚಿ ಡಿ.ಕೆ.ಲಿಂಗಸುಗೂರು ಮಾತನಾಡಿ, ಸಂಘಟನೆಯ ನಿಯಮಗಳನ್ನು ಪಾಲಿಸುವುದರ ಜತೆಗೆ ಕಾರ್ಮಿಕರ ಸಂಕಷ್ಟಗಳಿಗೆ ಧ್ವನಿಯಾಗುವ ಕೆಲಸವನ್ನು ಎಲ್ಲರೂ ಒಗ್ಗೂಡಿ ಮಾಡಬೇಕು. ಕಾರ್ಮಿಕ ವಿರೋ ತೀರ್ಮಾನಗಳನ್ನು ಹೋರಾಟದ ಮೂಲಕ ತಡೆಯಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಜಿ.ಅಮರೇಶ, ಪದಾಕಾರಿಗಳಾದ ಚಿನ್ನಪ್ಪ ಕೊಟ್ರಿಕಿ, ದೇವಮ್ಮ, ನಸ್ರೀನಾ ಬೇಗಂ, ತಿಪ್ಪರಾಜ, ಅಜೀಜ್ ಜಾಗೀರದಾರ್, ನಿರಂಜನ, ಬಸವರಾಜ, ಎಚ್.ಆರ್.ಹೊಸಮನಿ, ಲಕ್ಷ್ಮಣ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net