ಜಿಡ್ಡುಗಟ್ಟಿದ ವ್ಯವಸ್ಥೆ ವಿರುದ್ಧ ಶರಣರ ಹೋರಾಟ

The struggle of the Sharans against the corrupt system
The struggle of the Sharans against the corrupt system
Published on

ಕಲಬುರಗಿ ಬಸವಾದಿ ಶರಣರು 12ನೇ ಶತವಾನದಲ್ಲಿ ಜಿಡ್ಡುಗಟ್ಟಿದ ಸಂಪ್ರದಾಯವಾದಿಗಳು ಮತ್ತು ವ್ಯವಸ್ಥೆ ವಿರುದ್ಧ ಹೋರಾಡಿದ್ದರು. ಕ್ರಾಂತಿಕಾರಿ ವಚನಗಳನ್ನು ರಚಿಸಿ ಸವಾಜ ಸುಧಾರಣೆಗೆ ಶ್ರಮಿಸಿದ್ದರು ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಜಗದ್ಗುರು ಡಾ. ಗಂಗಾದೇವಿ ಮಾತಾಜಿ ಹೇಳಿದರು.

ಕೆಕೆಸಿಸಿಐ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಬಸವ ಪ್ರಕಾಶನದ ಸಂಸ್ಥಾಪಕಿ ಬಸಮ್ಮ ಬಿ. ಕೊನೇಕ್ ಸ್ಮರಣಾರ್ಥ ನೀಡುವ ರಾಜ್ಯಮಟ್ಟದ ಬಸವ ಸಿರಿ ಪ್ರಶಸ್ತಿ ಪ್ರದಾನ, ಕಾಯಕ ದಿನಾಚರಣೆಯಲ್ಲಿ ಮಾತನಾಡಿದ ಅವರು, ಬಸವಾದಿ ಶರಣರ ಶ್ರೇಷ್ಠವಾದ ವಚನ ಸಾಹಿತ್ಯ ಸುಟ್ಟು ಹಾಕುವ ಹುನ್ನಾರ ಎಲ್ಲೆಡೆ ನಡೆದಿತ್ತು. ಆದರೆ ಶರಣರು ಪ್ರಾಣ ಪಣಕ್ಕಿಟ್ಟು ವಚನ ಸಾಹಿತ್ಯ ಉಳಿಸಿದರು. ಆದ್ದರಿಂದಲೇ ಇಂದಿಗೂ ಶರಣರು ವಚನಗಳ ರೂಪದಲ್ಲಿ ನಮ್ಮ ಮಧ್ಯೆ ಜೀವಿಸುತ್ತಿದ್ದಾರೆ ಎಂದರು.

ಬಹುದೊಡ್ಡ ಕ್ರಾಂತಿಯಾಗಿ ಎಲ್ಲ ಶರಣರು ಐಕ್ಯರಾದರೂ ವಚನಗಳಲ್ಲಿ ನಮ್ಮೆದುರು ಜೀವಂತವಾಗಿದ್ದಾರೆ. ಬಸವಣ್ಣನ ವಚನಗಳಲ್ಲಿ ಪೂಜಾ ವೈಭವಗಳಿಲ್ಲ, ಬದಲಿಗೆ ಸವಾಜದಲ್ಲಿ ಹೇಗೆ ಬದುಕಬೇಕು ಎಂಬ ಸಂದೇಶವಿದೆ ಎಂದು ಹೇಳಿದರು.

ವಾರ್ತಾ ಮತ್ತು ಪ್ರಚಾರ ಇಲಾಖೆ ನಿವತ್ತ ಜಂಟಿ ನಿರ್ದೇಶಕ ಅಪ್ಪಾರಾವ ಅಕ್ಕೋಣಿ ವಾತನಾಡಿ, ಜಗತ್ತಿನ ದಾರ್ಶನಿಕರ ತತ್ವಾದರ್ಶಗಳಲ್ಲಿ ಬಸವಣ್ಣನವರ ಮೂಲ ತತ್ವಗಳು ವಿಭಿನ್ನ, ವಿಶಿಷ್ಟವಾಗಿವೆ. ಕಾಯಕ ದಾಸೋಹವನ್ನು ಬೋಧಿಸಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಹೆಮ್ಮೆ ಇದ್ದಂತೆ. ಎಲ್‌ಕೆಜಿ, ಯುಕೆಜಿ, ನರ್ಸರಿ ಮಕ್ಕಳಿಗೆ ಅಕ್ಷರ ಜ್ನಾನಕ್ಕಿಂತ ನೀತಿ ಕಥೆ, ಆಟೋಟಗಳ ಮಾಹಿತಿಯ ಪುಸ್ತಕ ನೀಡಬೇಕು ಎಂದು ಸಲಹೆ ನೀಡಿದರು.

ಜಗದ್ಗುರು ಡಾ. ಗಂಗಾ ವಾತಾಜಿ ಅವರಿಗೆ ‘ಬಸವ ಸಿರಿ’ ಪ್ರಶಸ್ತಿ ಪ್ರದಾನ ವಾಡಲಾಯಿತು. ಪ್ರಮುಖರಾದ ಬಿ.ಎಚ್. ನಿರಗುಡಿ, ಎಸ್.ಎನ್. ಪಾಟೀಲ್, ಸುಜಾತಾ ಜಂಗಮಶೆಟ್ಟಿ, ಡಾ.ಜಯದೇವಿ ಗಾಯಕವಾಡ, ಆರ್.ಜೆ. ಶೆಟಗಾರ, ಕಾವ್ಯಶ್ರೀ ಮಹಾಗಾಂವಕರ್, ಶರಣಬಸವ ಕೊನೇಕ್, ಸಿದ್ದಲಿಂಗ ಕೊನೇಕ್ ಇತರರಿದ್ದರು.

ಪ್ರೊ.ಶಿವರಾಜ ಪಾಟೀಲ್ ಪ್ರಾಸ್ತಾವಿಕ ವಾತನಾಡಿದರು. ಡಾ. ಗವಿಸಿದ್ದಪ್ಪ ಪಾಟೀಲ್ ಸ್ವಾಗತಿಸಿದರು. ಡಾ. ಶರಣಬಸಪ್ಪ ವಡ್ಡನೇಕರಿ ನಿರೂಪಣೆ ಮಾಡಿದರು. ಡಾ. ಚಿ.ಸಿ. ನಿಂಗಣ್ಣ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net