ಅಂಗನವಾಡಿ ಕಾರ್ಯಕರ್ತೆಯರ ಹೋರಾಟ ಅಂತ್ಯ

The struggle of Anganwadi workers is over
ಮುದ್ದೇಬಿಹಾಳದ ಅಂಗನವಾಡಿ ನೌಕರರ ಹೋರಾಟದ ಸ್ಥಳಕ್ಕೆ ತಹಸೀಲ್ದಾರ್ ರೇಖಾ ಟಿ., ತಾಪಂ ಪ್ರಭಾರ ಇಒ ವೀರೇಶ ಹಿರೇಮಠ, ಸಿಡಿಪಿಒ ಮಂಜುನಾಥ ಭೇಟಿ ನೀಡಿ ಹೋರಾಟಗಾರರ ಅಹವಾಲು ಆಲಿಸಿದರು.
Published on

ಮುದ್ದೇಬಿಹಾಳ: ತಹಸೀಲ್ದಾರ್, ತಾಪಂ ಇಒ ನಡೆಸಿದ ಸಂಧಾನ ಫಲ ನೀಡಿದ್ದು, ಕಳೆದ ಎಂಟು ದಿನಗಳಿಂದ ಅಂಗನವಾಡಿ ಕಾರ್ಯಕರ್ತೆಯರ ಐದು ಬೇಡಿಕೆಗಳ ಈಡೇರಿಕೆಯ ಕುರಿತಂತೆ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹವನ್ನು ತಹಸೀಲ್ದಾರ್, ತಾಪಂ ಇಒ ನಡೆಸಿದ ಸಂಧಾನದಿಂದ ಸೋಮವಾರ ಸಂಜೆ ಅಂತ್ಯಗೊಳಿಸಲಾಗಿದೆ.

ಪಟ್ಟಣದ ತಹಸೀಲ್ದಾರ್ ಕಚೇರಿ ಎದುರಿಗೆ ಎಂಟನೇ ದಿನದ ಹೋರಾಟವನ್ನು ಕಾರ್ಯಕರ್ತೆಯರು ಮುಂದುವರೆಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಅಂಗನವಾಡಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಉಮಾದೇವಿ, ಖಜಾಂಚಿ ಭುವನಾ ಹೋರಾಟಕ್ಕೆ ಬೆಂಬಲ ಸೂಚಿಸಿದರಲ್ಲದೇ ನ್ಯಾಯಯುತ ಬೇಡಿಕೆ ಈಡೇರಿಸಲು ಒತ್ತಾಯಿಸಿದರು.

ಸಂಜೆ ತಹಸೀಲ್ದಾರ್ ರೇಖಾ ಟಿ., ತಾಪಂ ಪ್ರಭಾರ ಇಒ ವೀರೇಶ ಹಿರೇಮಠ ಭೇಟಿ ನೀಡಿ ಧರಣಿ ನಿರತರ ಅಹವಾಲು ಆಲಿಸಿದರು. ಅಲ್ಲದೇ ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಎರಡು ತಿಂಗಳು ಕಾಲಾವಕಾಶ ಕೋರಿದ ಸಿಡಿಪಿಒ, ಅದಕ್ಕಾಗಿ ಎಫ್‌ಡಿಸಿ ಒಬ್ಬರನ್ನು ನಿಯೋಜಿಸಿ ಬಾಕಿ ಬಿಲ್, ವೇತನ ಪಾವತಿಯ ಸಮಸ್ಯೆಯನ್ನು ಸರಿಪಡಿಸುವುದಾಗಿ ಲಿಖಿತ ಉತ್ತರ ನೀಡಿದ್ದರಿಂದ ಹೋರಾಟ ಅಂತ್ಯಗೊಳಿಸಿದರು.

ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಸಾವಿತ್ರಿ ನಾಗರತ್ತಿ, ಕಾರ್ಯದರ್ಶಿ ರೇಣುಕಾ ಹಡಪದ, ಎಐಯುಟಿಯುಸಿ ಮುಖಂಡ ಮಲ್ಲಿಕಾರ್ಜುನ ಎಚ್.ಟಿ., ದಲಿತಪರ ಸಂಘಟನೆಯ ಬಸವರಾಜ ಪೂಜಾರಿ, ಆನಂದ ದೇವೂರ, ಮಹೆಬೂಬ ಹಡಲಗೇರಿ, ಪ್ರಕಾಶ ಚಲವಾದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net