ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ ಆರಂಭ

The strike of the village administrative officers has started
ಇಳಕಲ್ಲ ತಾಲೂಕು ದಂಡಾಧಿಕಾರಿಗಳ ಕಚೇರಿ ಮುಂದೆ ಗ್ರಾಮ ಸೇವಾ ಸಂಘದ ಪದಾಧಿಕಾರಿಗಳು ಲೇಖನಿ ಸ್ಥಗಿತ ಚಳವಳಿ ನಡೆಸಿ ತಹಸೀಲ್ದಾರ್ ಸತೀಶ ಕೂಡಲಗಿ ಅವರಿಗೆ ಮನವಿ ಸಲ್ಲಿಸಿದರು. ಶಂಕರ ಲಮಾಣಿ, ಸಿ. ಎಸ್. ಕೊಣ್ಣೂರ, ಯಮನಪ್ಪ ವಡ್ಡರ, ಶರಣಗೌಡ ಬಿರಾದಾರ, ಮಹಾಂತಸ್ವಾಮಿ ಕಲ್ಮಠ, ನಾಸೀರ್ ಬೋರಗಿ, ಎಸ್. ಜಿ. ಪಾರ್ವತಿಮಠ, ವಿಜಯ ರೋಣ ಇತರರಿದ್ದರು.
Published on

ಇಳಕಲ್ಲ(ಗ್ರಾ): ನಗರದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಅಖಿಲ ಕರ್ನಾಟಕ ಗ್ರಾಮ ಸೇವಾ ಸಂಘದ ವತಿಯಿಂದ ಗುರುವಾರ ಲೇಖನಿ ಸ್ಥಗಿತ ಚಳವಳಿ ಆರಂಭಿಸಲಾಯಿತು.

ಮೊಬೈಲ್ ತಂತ್ರಾಂಶವನ್ನು ಎಲ್ಲ ಕಚೇರಿಗಳಿಗೂ ಒದಗಿಸಬೇಕು. ಹಳೆಯ ನೌಕರರಿಗೆ ತರಬೇತಿ ನೀಡಬೇಕೆಂದು ಪದಾಧಿಕಾರಿಗಳು ಆಗ್ರಹಿಸಿದರು. ಬಳಿಕ ತಹಸೀಲ್ದಾರ್ ಸತೀಶ ಕೂಡಲಗಿ ಅವರಿಗೆ ಮನವಿ ಸಲ್ಲಿಸಲಾಯಿತು.

ತಾಲೂಕಿನ ಎಲ್ಲ ಸಿಬ್ಬಂದಿ ಚಳವಳಿಯಲ್ಲಿ ಪಾಲ್ಗೊಂಡಿದ್ದರಿಂದ ಸಾರ್ವಜನಿಕ ಕಾರ್ಯಗಳಿಗೆ ತೊಂದರೆ ಆಯಿತು. ಸಂಘದ ಅಧ್ಯಕ್ಷ ಶಂಕರ ಲಮಾಣಿ, ಸಿ. ಎಸ್. ಕೊಣ್ಣೂರ , ಯಮನಪ್ಪ ವಡ್ಡರ ನೇತೃತ್ವ ವಹಿಸಿದ್ದರು.

ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಉಪಾಧ್ಯಕ್ಷ ಶರಣಗೌಡ ಬಿರಾದಾರ, ಮಹಾಂತಸ್ವಾಮಿ ಕಲ್ಮಠ, ನಾಸೀರ್ ಬೋರಗಿ, ಎಸ್. ಜಿ. ಪಾರ್ವತಿಮಠ, ವಿಜಯ ರೋಣದ ಮತ್ತು ತಾಲೂಕಿನ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳು, ತಾಲೂಕು ಕಂದಾಯ ನೌಕರರು, ಗ್ರಾಮ ಸಹಾಯಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net