

ಬಾದಾಮಿ: ಇಮ್ಮಡಿ ಪುಲಿಕೇಶಿ ಮೂರ್ತಿ ಪ್ರತಿಷ್ಟಾಪಣೆ ಇದು ರಾಜ್ಯದ ಹೆಮ್ಮೆಯ ವಿಷಯ. 65 ವರ್ಷಗಳ ಹಿಂದೆನೆ ಸಂಸ್ಥೆಯ ಸಂಸ್ಥಾಪಕರು ವೀರಪುಲಿಕೇಶಿ ಎಂದು ನಾಮಕರಿಸಿ ಪುಲಿಕೇಶಿ ಹೆಸರಲ್ಲಿ ಶಿಕ್ಷಣದ ದಾಸೋಹ ಮಾಡುತ್ತಿರುವುದು ಶ್ಲಾಘನೀಯ. ಅವರ ದೂರದಷ್ಟಿಗೆ ನನ್ನ ನಮನ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ಇಲ್ಲಿಯ ವೀರಪುಲಿಕೇಶಿ ವಿದ್ಯಾ ಸಂಸ್ಥೆಯ ಬಸವ ಮಂಟಪದಲ್ಲಿ ಎಸ್‌ಬಿಎಂ ಪದವಿ ಕಾಲೇಜು ಆವರಣದಲ್ಲಿ ಇಮ್ಮಡಿ ಪುಲಿಕೇಶಿ ಮೂರ್ತಿ ಪ್ರಷ್ಟಾಪಣಾ ಸಮಾರಂಭದಲ್ಲಿ ಮಾತನಾಡಿದ ಅವರು ಇಮ್ಮಡಿ ಪುಲಕೇಶಿ ಮೂರ್ತಿ ಪ್ರತಿಷ್ಟಾಪಣೆ ಆಗಬೇಕು ಎಂಬುದು ಈ ನಾಡಿನ ಜನರ ಬೇಡಿಕೆಯಾಗಿತ್ತು. ಸಧ್ಯ ಸಂಸ್ಥೆಯ ಆವರಣದಲ್ಲಿ ಆಗಿದೆ. ಚಾಲುಕ್ಯರ ನಾಡು ಬಾದಾಮಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶ್ವ ಮಾನ್ಯ ಪಡೆದಿದೆ. ನಮ್ಮ ಪೂರ್ವಜರ ಬಗ್ಗೆ ನಮಗೆ ಹೆಮ್ಮೆ ಇರಬೇಕು. ನಗರದಲ್ಲಿ ಪುಲಿಕೇಶಿ ಮತ್ತು ಬಸವಣ್ಣ ಮೂರ್ತಿಗಳು ಪ್ರತಿಷ್ಟಾಪಣೆ ಸಾರ್ವಜನಿಕವಾಗಿ ಒತ್ತಾಯವಿದೆ ಎಂದ ಅವರು ಬಾದಾಮಿ ಚಾಲುಕ್ಯರ ನಾಡಿಗೆ ಶಾಸಕರಿದ್ದ ಸಿದ್ದರಾಮಯ್ಯ ಅವರು ಅಭಿವದ್ಧಿ ಮಾಡಿದರು ಎಂದುಕೊಂಡಿದ್ದೆ ಆದರೆ ಅಭಿವದ್ಧಿ ಅಲ್ಲ ನಾಡಿನ ದೊರೆಯ ಮೂರ್ತಿ ಪ್ರತಿಷ್ಟಾಪಣೆಯೂ ಆಗಲಿಲ್ಲ ಎಂಬುದು ವಿಪರ್ಯಾಸ ಎಂದರು.
ಭಾರತೀಯ ಪುರಾತತ್ವ ಇಲಾಖೆಯ ಅೀಕ್ಷಕ ರಮೇಶ ಮೇಲಿನಮನಿ ಮಾತನಾಡಿಈ ನಾಡಿನ ಮಣ್ಣು ಚಿನ್ನದಂತಿದೆ. ಇಲ್ಲಿಯ ಶಿಲ್ಪಕಲೆಗಳು ವಿಶ್ವದ ಜನರನ್ನೆ ಸೆಳೆಯುವ ಆಕರ್ಷಣೆ ಹೊಂದಿವೆ. ಪುಲಿಕೇಶಿ ವಂಶಸ್ಥರ ಕೊಡುಗೆ ಅಪಾರ. ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರದ್ದಾಗಿದೆ ಎಂದರು.
ಸಂಸ್ಥೆ ಕಾರ್ಯಾಧ್ಯಕ್ಷ ಎ.ಸಿ.ಪಟ್ಟಣದ ಮಾತನಾಡಿ, ಸುವರ್ಣ ಮಹೋತ್ಸವ ದಾಟಿದ ಶಿಕ್ಷಣ ದಾಸೋಹ ಸಂಸ್ಥೆಯ ಪ್ರಗತಿ ಬಗ್ಗೆ ತಿಳಿಸಿದರು.
ಹೊಳೆಹುಚ್ಚೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ನಿವತ್ತ ಪ್ರಾಧ್ಯಾಪಕ ಡಾ. ಈರಣ್ಣ ಪತ್ತಾರ ಪುಲಿಕೇಶಿ ಜೀವನ ಚರಿತ್ರೆ ಕುರಿತು ಹಾಗೂ ಪ್ರಾಚಾರ್ಯ ರವೀಂದ್ರ ಮೂಲಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪೂರ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ, ಎಸ್.ಜಿ.ಕಾರುಡಗಿಮಠ, ಶ್ರೀಧರ ಪತ್ತೇಪೂರ, ನಾಗರಾಜ ಕಾಚೆಟ್ಟಿ ಉಪಸ್ಥಿತರಿದ್ದರು.
ಮೆರವಣಿಗೆ: ಪುಲಿಕೇಶಿ ಮೂರ್ತಿಯನ್ನು ಸ್ಥಳೀಯ ಬಸವೇಶ್ವರ ವತ್ತದಿಂದ ಆರಂಭಗೊಂಡು ಬಸ್ ನಿಲ್ದಾಣ, ಶಿವಾಜಿ ಸರ್ಕಲ್, ರಾಮದುರ್ಗ ಕ್ರಾಸ್ ಮೂಲಕ ವೀರಪುಲಿಕೇಶಿ ವಿದ್ಯಾ ಸಂಸ್ಥೆಯ ಆವರಣ ತಲುಪಿತು. ಮೆರವಣಿಗೆಯ ರಸ್ತೆ ಉದ್ದಕ್ಕೂ ಇಮ್ಮಡಿ ಪುಲಿಕೇಶಿಯ ಜಯಘೋಷಗಳ ಹಾಗೂ ಡೊಳ್ಳು, ಕೋಲಾಟ, ಕರಡಿಮಜಲು ವಾದ್ಯಗಳೊಂದಿಗೆ ಸಂಭ್ರಮದಿಂದ 2 ಸಾವಿರ ವಿದ್ಯಾರ್ಥಿಗಳ ಪಾಲ್ಗೊಂಡು ಯಶಸ್ವಿಗೊಳಿಸಿದರು.