ಮೀಸಲಾತಿ ರದ್ದು ಹೇಳಿಕೆ ಖಂಡನೀಯ

Published on

ಮಂಜೇಶ್ವರ: ಕಾಂಗ್ರೆಸ್​ ಪಕ್ಷದ ಮನಸ್ಥಿತಿ ದಲಿತ ವಿರೋಧಿ, ಅದಕಾಗಿಯೇ ಕಾಂಗ್ರೆಸ್​ ಅಂದು ಸಂವಿಧಾನ ಶಿಲ್ಪಿ ಅಂಬೇಡ್ಕರ್​ರನ್ನು ಚುನಾವಣೆಯಲ್ಲಿ ಪರಾಭವಗೊಳಿಸಿದ್ದು. ಇದೀಗ ಅಂಬೇಡ್ಕರ್​ ಅವರ ಸಂವಿಧಾನಬದ್ಧ ಮೀಸಲಾತಿಯನ್ನು ವಿದೇಶದಲ್ಲಿ ಕುಳಿತು ರಾಹುಲ್​ ಗಾಂಧಿ ತೆಗೆಯುವ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ ಎಂದು ಎಸ್​.ಸಿ&ಎಸ್​.ಟಿ ಮೋರ್ಚಾ ಕೇರಳ ರಾಜ್ಯ ಉಪಾಧ್ಯಕ್ಷ ಎ.ಕೆ.ಕಯ್ಯಾರ್​ ಅಭಿಪ್ರಾಯಪಟ್ಟರು.

ಬಿಜೆಪಿ ಮಂಜೇಶ್ವರ ಮಂಡಲ ಸದಸ್ಯತ್ವ ಅಭಿಯಾನದ ಹೊಸಂಗಡಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. ದಲಿತರನ್ನು ಬಿಜೆಪಿ ರಾಷ್ಟ್ರಪತಿ ಮಾಡಿದಾಗಲೂ ಕಾಂಗ್ರೆಸ್​ ಸಮಾರಂಭ ಬಹಿಷ್ಕರಿಸಿದ್ದು, ಅದು ದಲಿತ ವಿರೋಧಿ ಪಕ್ಷ ಎಂಬುದಕ್ಕೆ ಸಾಕ್ಷಿ ಎಂದರು.

ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ.ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಶ್ರೀಕಾಂತ್​ ಉದ್ಘಾಟಿಸಿಡಿದರು. ಮುಖಂಡರಾದ ಮಣಿಕಂಠ ರೈ, ಸುಮಂಗಲ ಹೊಸಬೆಟ್ಟು, ಮಂಜುನಾಥ್​ ಮುಳಿಗದ್ದೆ, ಜಯಲಕ್ಷಿ$್ಮ ಭಟ್​, ಯಾದವ ಬಡಾಜೆ, ಕೋಡಿ ಶೇಖರ, ಚಂದ್ರಹಾಸ ಕೆ.ಮೊದಲಾದವರು ಉಪಸ್ಥಿತರಿದ್ದರು. ಯತಿರಾಜ್​ ಸ್ವಾಗತಿಸಿ, ಕೆ.ವಿ.ಭಟ್​ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net