ವಿದ್ಯುತ್ ದರ ಏರಿಕೆಯಿಂದ ಕೈಗಾರಿಕೆಗಳ ಬಾಗಿಲು ಮುಚ್ಚುವ ಸ್ಥಿತಿ

22 GJD PROTES
ಗಜೇಂದ್ರಗಡ ಪಟ್ಟಣದಲ್ಲಿ ವಾಣಿಜ್ಯೋದ್ಯಮ ಸಂಸ್ಥೆ, ವರ್ತಕರ ಸಂಘ ಹಾಗೂ ವಿದ್ಯುತ್ ಮಗ್ಗಗಳ ಮಾಲೀಕರು ಪ್ರತಿಭಟನೆ ನಡೆಸಿದರು.
Published on

ಗಜೇಂದ್ರಗಡ: ವಿದ್ಯುತ್ ಬೆಲೆ ಏರಿಕೆ ಖಂಡಿಸಿ ಸ್ಥಳೀಯ ವಾಣಿಜ್ಯೋದ್ಯಮ ಸಂಸ್ಥೆ, ವರ್ತಕರ ಸಂಘ ಹಾಗೂ ವಿದ್ಯುತ್ ಮಗ್ಗಗಳ ಮಾಲೀಕರು ಗುರುವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಮೆರವಣಿಗೆಯು ಪಟ್ಟಣದ ಎಪಿಎಂಸಿ ಗಣೇಶ ದೇವಸ್ಥಾನದಿಂದ ಪ್ರಾರಂಭವಾಗಿ, ಕಾಲಕಾಲೇಶ್ವರ ವೃತ್ತ, ದುರ್ಗಾ ವೃತ್ತ, ಭಗವಾನ್ ಮಹಾವೀರ ವೃತ್ತ, ಶಿವಾಜಿ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿ ತಲುಪಿತು. ಅಲ್ಲಿ ಪಟ್ಟಣದ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎಂ.ಎಸ್. ಹಿರೇಮನಿ ಮಾತನಾಡಿ, ಈಗಾಗಲೇ ಎಲ್ಲ ವಸ್ತುಗಳ ಬೆಲೆ ಏರಿಕೆಯಿಂದ ವ್ಯಾಪಾರಸ್ಥರು ತೊಂದರೆಯಲ್ಲಿದ್ದು, ವ್ಯಾಪಾರ ಸರಿಯಾಗಿ ನಡೆಯುತ್ತಿಲ್ಲ. ಈಗ ವಿದ್ಯುತ್ ಬೆಲೆ ಏರಿಕೆ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.

ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಂಸ್ಥೆಗಳ ಅಳಿವು- ಉಳಿವಿನ ಪ್ರಶ್ನೆ ಉದ್ಬವಿಸಿದೆ. ವಿದ್ಯುತ್ ದರ ಅವೈಜ್ಞಾನಿಕವಾಗಿ ಪರಿಷ್ಕರಣೆ ಮಾಡಿ ಶೇ50 ರಿಂದ 70ರಷ್ಟು ಹೆಚ್ಚುವರಿ ಬಿಲ್ ನೀಡಲಾಗಿದೆ. ಇದು ಕೈಗಾರಿಕೆಗಳು ಹಾಗೂ ಉದ್ಯಮಿಗಳಿಗೆ ಮಾರಕವಾಗಿದ್ದು, ಇದು ಮುಂದುವರಿದರೆ ಕೈಗಾರಿಕೆಗಳ ಬಾಗಿಲು ಮುಚ್ಚುವ ಸ್ಥಿತಿ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಐ.ಡಿ. ಮ್ಯಾಗೇರಿ, ಅಮರೇಶ ಬಳಿಗೇರ, ಶ್ರೇಯಾಂಕ್ ಬಾಗಮಾರ, ಬಿ.ಕೆ. ಪುರ್ತಗೇರಿ, ವೀರೇಶ ನಂದಿಹಾಳ, ಮೋಹನ ಕನಕೇರಿ, ಭೀಮಸೇನ ಸೂರ್ಯವಂಶಿ, ಉಮೇಶ ಮೆಣಸಗಿ, ರಾಮಚಂದ್ರ ಪೂಜಾರ, ಎಸ್.ಕೆ. ರಾಯಬಾಗಿ, ಅಶೋಕ ರಾಯಬಾಗಿ, ಪ್ರವೀಣ ರಾಯಬಾಗಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net