

ಹುಬ್ಬಳ್ಳಿ : ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲು ಸಂಚು ರೂಪಿಸುತ್ತಿರುವ ರಾಜ್ಯ ಸರ್ಕಾರ ಬಡವರ ಅನ್ನ ಕಸಿಯುವ ಕೆಲಸವನ್ನು ಮಾಡುತ್ತಿದೆ. ಬಡ ಜನರು ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಡವರಿಗೆ ತೊಂದರೆ ಕೊಡುತ್ತಿಲ್ಲವೆನ್ನುವ ಮೂಲಕ ಆಹಾರ ಸಚಿವ ಮುನಿಯಪ್ಪ ಅವರು, ಜನರ ಕಣ್ಣಲ್ಲಿ ಮಣ್ಣು ಎರಚುವ ಕೆಲಸ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ಅಧಿಕಾರಗಳ ತಪ್ಪಿಲ್ಲ, ಇದು ನನ್ನ ತಪ್ಪು ಎಂದು ಸಚಿವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಹಾಗಾದರೆ, ರಾಜೀನಾಮೆ ಕೊಟ್ಟುಬಿಡಿ. ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಟೆಂಗಿನಕಾಯಿ ಹೇಳಿದ್ದಾರೆ.
ಪಡಿತರ ಚೀಟಿಗಳು ರದ್ದಾದ ಕುರಿತು ಸಚಿವ ಮುನಿಯಪ್ಪ ಅವರು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲು ಹೋಗಿದ್ದು ದುರದೃಷ್ಟಕರ. ದೇಶದ ಸುಮಾರು 80 ಲಕ್ಷ ಬಡ ಜನರಿಗೆ ಕೇಂದ್ರ ಸರ್ಕಾರ ಉಚಿತ ಅಕ್ಕಿ ನೀಡುತ್ತಿರುವುದನ್ನು ಸಚಿವರು ಗಮನಿಸಬೇಕು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲವೂ ತಮಾಷೆಯಾಗಿ ಬಿಟ್ಟಿದೆ. ಯಾವೊಬ್ಬ ಸಚಿವರಿಗೂ ಗಂಭೀರತೆ ಇಲ್ಲ ಎಂಬುದು ಇತಿ್ತೕಚಿನ ಬೆಳವಣಿಗೆ ನೋಡಿದರೆ ಸಾಬೀತಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಪ್ರಕಟಣೆಯಲ್ಲಿ ಹೇಳಿದ್ದಾರೆ.