ಸಂಘಟನೆ ಹೆಸರು ಹೇಳುವ ಶಕ್ತಿಯೂ ರಾಜ್ಯ ಸರ್ಕಾರಕ್ಕಿಲ್ಲ

Ex dcm k.s.Eshwarappa
Published on

ಶಿವಮೊಗ್ಗ: ಆರ್‌ಎಸ್‌ಎಸ್ ಕಾರ್ಯಚಟುವಟಿಕೆಗಳನ್ನು ಸರ್ಕಾರಿ ಸ್ಥಳಗಳಲ್ಲಿ ಮಾಡದಂತೆ ಸಂಘಟನೆ ಹೆಸರು ಹೇಳದೆ ಸಚಿವ ಸಂಪುಟ ಸಭೆ ತೀರ್ಮಾನ ತೆಗೆದುಕೊಂಡಿದ್ದು, ಆರ್‌ಎಸ್‌ಎಸ್ ಹೆಸರು ಹೇಳುವ ತಾಕತ್ತು ಕೂಡ ರಾಜ್ಯ ಸರ್ಕಾರಕ್ಕೆ ಇಲ್ಲದಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಟೀಕಿಸಿದರು.

ಹಿಂದೆ ಮೂರು ಬಾರಿ ದೇಶದಲ್ಲಿ ಆರ್‌ಎಸ್‌ಎಸ್ ಬ್ಯಾನ್ ಮಾಡಲಾಗಿತ್ತು. ತುರ್ತು ಪರಿಸ್ಥಿತಿ ವೇಳೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರೇ ಸ್ವತಃ ಆರ್‌ಎಸ್‌ಎಸ್ ಬ್ಯಾನ್ ಮಾಡಲು ಮುಂದಾಗಿದ್ದರು. ಆದರೆ ಬ್ಯಾನ್ ಮಾಡಲು ಹೊರಟವರೇ ಈವರೆಗೆ ನಾಶವಾಗಿದ್ದಾರೆ. ಹಿಂದುತ್ವದಡಿ ಆರ್‌ಎಸ್‌ಎಸ್ ಕೆಲಸ ಮಾಡುತ್ತಿರುವ ಕಾರಣ ಅದನ್ನು ಮುಟ್ಟುವುದಕ್ಕೂ ಯಾರಿಂದಲೂ ಆಗುವುದಿಲ್ಲ. ಪ್ರಿಯಾಂಕ್ ಖರ್ಗೆ ಸೇರಿ ಕೆಲವರು ಸಂಘಟನೆ ಬ್ಯಾನ್ ಮಾಡುವ ಬಗ್ಗೆ ಧ್ವನಿ ಎತ್ತಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಪಕ್ಷ ಸ್ಥಾಪನೆ ಬಗ್ಗೆ ನನಗೆ ಗೊತ್ತಿಲ್ಲ. ನಾನು ಬಿಜೆಪಿ ಬಿಟ್ಟು ಬೇರೆ ಯಾವುದೇ ಪಕ್ಷಗಳಿಗೂ ಹೋಗುವುದಿಲ್ಲ. ಬಿಜೆಪಿ ನನ್ನ ಮಾತೃಪಕ್ಷ. ಪಕ್ಷ ಶುದ್ಧೀಕರಣ ಆಗುವವರೆ ನಾನು ಬಿಜೆಪಿಗೂ ಹೋಗುವುದಿಲ್ಲ. ಬೇರೆ ಯಾವುದೇ ಪಕ್ಷಗಳಿಗೆ ಹೋಗುವುದನ್ನು ಕನಸಿನಲ್ಲಿಯೂ ಯೋಚನೆ ಮಾಡಲಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net