ಮೊಬೈಲ್​ ವರ್ಜನ ಶಿಬಿರ ಆರಂಭದ ಕಾಲ ದೂರವಿಲ್ಲ

2dvk 7
Published on

ಬೆಳಗಾವಿ: ಮದ್ಯವ್ಯಸನ ದೂರ ಮಾಡಲು ಇರುವ ವರ್ಜನ ಶಿಬಿರಗಳಂತೆ ಮುಂದೊಂದು ದಿನ ಮೊಬೈಲ್​ ವರ್ಜನ ಶಿಬಿರ ಪ್ರಾರಂಭವಾಗುವ ಕಾಲ ದೂರವಿಲ್ಲ ಎಂದು ನಾಗನೂರು ರುದ್ರಾ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಶಿವಬಸವ ನಗರದ ಪ್ರಭುದೇವ ಸಭಾಗೃಹದಲ್ಲಿ ಸಿದ್ದರಾಮೇಶ್ವರ ಸಂಯುಕ್ತ ಪ.ಪೂ.ಮಹಾವಿದ್ಯಾಲಯದ ಶಾಲಾ ಸಂಸತ್​ ಹಾಗೂ ಸಾಂಸತಿಕ ಸಂಗಳ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸಾಮಾಜಿಕ ಜಾಲತಾಣಗಳ ಹಾವಳಿಯಿಂದ ಮೊಬೈಲ್​ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಯುವಕರು ದೈಹಿಕ ಶ್ರಮವಿಲ್ಲದೆ ರೋಗ, ರುಜಿನಗಳಿಗೆ ತುತ್ತಾಗಿ ಆಲಸ್ಯ ಜೀವನ ಸವೆಸುತ್ತಿದ್ದಾರೆ. ಇದು ಆಪಾಯಕಾರಿ ಬೆಳವಣಿಗೆ ಎಂದರು.

ಗದಗ ಪಶು ವೈದ್ಯಕಿಯ ಇಲಾಖೆಯ ಉಪನಿರ್ದೇಶಕ ಡಾ. ಎಚ್​.ಬಿ. ಹುಲಗನ್ನವರ ಮಾತನಾಡಿ, ವಿದ್ಯಾರ್ಥಿಗಳು ಬಾಲ್ಯದಿಂದಲೇ ಒಂದು ದೊಡ್ಡ ಗುರಿ ಇಟ್ಟುಕೊಂಡು ನಿರಂತರ ಪರಿಶ್ರಮ ಪಟ್ಟರೆ ಖಂಡಿತವಾಗಿಯೂ ಇಟ್ಟ ಗುರಿ ತಲುಪಬಹುದು ಎಂದರು.

ಪ್ರಸಾದ ನಿಲಯಗಳ ಹಳೆಯ ವಿದ್ಯಾರ್ಥಿಗಳ ಸಂದ ಅಧ್ಯಕ್ಷ ಬಸವರಾಜ ರೊಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಚಾಯೆರ್ ಶಿವಲೀಲಾ ಪೂಜಾರ, ಜಾನಕಿ ಪಾಟೀಲ, ಎಲ್​.ಬಿ. ಮೆಳವಂಕಿ, ಮನೋಹರ ಉಳ್ಳೇಗಡ್ಡಿ , ಪಿ.ಬಿ. ಶಿದ್ರಾಮನಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net