

ಬೆಂಗಳೂರು: ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಸಹಯೋಗದಲ್ಲಿ ಜೈನ್ ಡೀಮ್್ಡ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಮ್ಯಾನೇಜ್ವೆುಂಟ್ ಸ್ಟಡೀಸ್ (ಸಿಎಂಎಸ್) ಜೆ.ಪಿ. ನಗರದ ಎಂಎಲ್ಆರ್ ಕನ್ವೆನ್ಷನ್ ಸೆಂಟರ್ನಲ್ಲಿ ಆಯೋಜಿಸಿರುವ ಎರಡು ದಿನಗಳ ‘ಸಿಎಂಎಸ್ ಫೆಸ್ಟಿವಲ್’ಗೆ ಗುರುವಾರ ಚಾಲನೆ ದೊರೆತಿದೆ.
ಐಬಿಎಂ ಕಂಪನಿಯ ಕಾರ್ಯಾಚರಣೆ ಮುಖ್ಯಸ್ಥ ಸುನೀಲ್ ಶೆಟ್ಟಿ ಉದ್ಘಾಟಿಸಿ, ತಾವು ಕೂಡ ಕನ್ನಡ ಮಾಧ್ಯಮ ವಿದ್ಯಾರ್ಥಿಯಾಗಿದ್ದು ಆರಂಭದಲ್ಲಿ ಐಬಿಎಂನಲ್ಲಿ ಉದ್ಯೋಗ ಸಿಕ್ಕಾಗ ಆಂಗ್ಲ ಭಾಷೆ ಸೇರಿ ಇನ್ನಿತರ ಸಮಸ್ಯೆ ಉಂಟಾಗಿತ್ತು. ಅವುಗಳನ್ನು ಸಮರ್ಥವಾಗಿ ಎದುರಿಸಿದೆ. ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು ಎಲ್ಲ ಸವಾಲುಗಳನ್ನು ಎದುರಿಸಬೇಕು ಎಂದು ಹೇಳಿದರು.
ಸಿಎಂಎಸ್ ಕಾಲೇಜು ಪ್ರಾಂಶುಪಾಲ ದಿನೇಶ್ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಗೊಳಿಸಲು ಪ್ರತಿವರ್ಷ ಸಿಎಂಎಸ್ ಫೆಸ್ಟಿವಲ್ ಆಯೋಜಿಸಲಾಗುತ್ತಿದೆ. ಈ ಬಾರಿಯ ಫೆಸ್ಟಿವಲ್ನಲ್ಲಿ ದೇಶಾದ್ಯಂತ 60 ಕಾಲೇಜುಗಳಿಂದ 4 ಸಾವಿರ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ಸ್ಪರ್ಧೆಯಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣಪತ್ರ ನೀಡಲಾಗುತ್ತಿದೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಂದ ವಿದ್ಯಾರ್ಥಿಗಳಿಗೆ ಕಾಪೋರೇಟ್ ಸೇರಿ ವಿವಿಧ ಕೌಶಲ ಕಲಿಯಲು ಸಹಾಯವಾಗುತ್ತದೆ ಎಂದರು.
ಸಿಎಂಎಸ್ ಫೆಸ್ಟಿವಲ್ನಲ್ಲಿ ಎಲ್ಲ ರೀತಿಯ ಚಟುವಟಿಕೆಗಳು ಇವೆ. ದೇಶಾದ್ಯಂತ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಾರೆ. ಇಂತಹ ಮ್ಯಾನೆಂಜ್ವೆುಂಟ್ ಫೆಸ್ಟಿವಲ್ನಿಂದ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕಾಫೋರೇಟ್ ಜಗತ್ತಿನಲ್ಲಿ ಏನೇನು ನಡೆಯುತ್ತದೆ ಎಂಬುದರ ಬಗ್ಗೆ ಗೊತ್ತಾಗುತ್ತದೆ. ಕ್ವಿಜ್ ಮತ್ತು ಗ್ರೂಪ್ ಡಾನ್ಸ್ ಮತ್ತಿತರರ ಕಾರ್ಯಕ್ರಮಗಳು ನಡೆಯಲಿವೆ ಎಂದು ಬಿಬಿಎ ವಿಭಾಗದ ಮುಖ್ಯಸ್ಥ ಪ್ರೊ. ಉಮಾಕಾಂತ್ ವಿವರಿಸಿದರು.
ಇಂದಿನ ಕಾರ್ಯಕ್ರಮಗಳು
ಶುಕ್ರವಾರ (ಜ.10) ಬೆಳಗ್ಗೆ 10ಕ್ಕೆ ವೆಸ್ಟರ್ನ್ಗ್ರೂಪ್ ಡಾನ್ಸ್, 2.30ಕ್ಕೆ ಇಂಡಿಯನ್ ಗ್ರೂಪ್ ಡಾನ್ಸ್, ಸಂಜೆ 6.30ಕ್ಕೆ ಮ್ಯೂಸಿಕ್ ಸೇರಿ ಮತ್ತಿತರರ ಕಾರ್ಯಕ್ರಮಗಳು ಇರಲಿವೆ.
ಸಭಿಕರ ಮನರಂಜಿಸಿದ ಮಾರ್ಜಾಲ ನಡಿಗೆ
ಸೆಂಟರ್ ಫಾರ್ ಮ್ಯಾನೇಜ್ವೆುಂಟ್ ಸ್ಟಡೀಸ್ ವಿದ್ಯಾರ್ಥಿಗಳು ನಡೆಸಿಕೊಟ್ಟ ಫ್ಯಾಷನ್ ಶೋ ಆಕರ್ಷಕವಾಗಿತ್ತು. ಕಿವಿಗಡಚಿಕ್ಕುವ ಡಿಜೆ ಸಂಗೀತದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಕ್ಯಾಟ್ವಾಕ್ ಮಾಡಿ ಸಭಿಕರನ್ನು ರಂಜಿಸಿದರು. ಅಲ್ಲದೆ, ಲಾಸ್ಯ, ಬಾಟಲ್ ಅಫ್ ಬ್ಯಾಂಡ್ಸ್, ಕಾಮಿಡಿ ಶೋ, ಬೆಸ್ಟ್ ಮ್ಯಾನೇಜರ್ ಸೇರಿ ವಿವಿಧ ಸ್ಪರ್ಧೆಗಳು ನಡೆದವು.
ಫೆಸ್ಟ್ ಅನ್ನು ವಿದ್ಯಾರ್ಥಿಗಳೇ ಆಯೋಜಿಸಿದ್ದು, ನಾವು ಬೆಂಬಲ ನೀಡುತ್ತಿದ್ದೇವೆ. ಇದರಿಂದ ಆತ್ಮವಿಶ್ವಾಸ ಮತ್ತು ನಾಯಕತ್ವ ಗುಣ ಮತ್ತಿತರ ಕೌಶಲಗಳನ್ನು ಕಲಿಯಲು ಅವರಿಗೆ ಅನುಕೂಲವಾಗುತ್ತದೆ. | ಜಯಶ್ರೀ ಫೆಸ್ಟ್ ಸಂಯೋಜಕಿ , ಜೈನ್ ಡೀಮ್್ಡ ವಿಶ್ವವಿದ್ಯಾಲಯ