ಬಣವೆಗೆ ಬೆಂಕಿ ತಗುಲಿ ಹಾನಿ

Banave
Published on

ದಾಂಡೇಲಿ: ವಿದ್ಯುತ್ ತಂತಿಯ ಕಿಡಿಯಿಂದಾಗಿ ಮೂರು ಬಣವೆಗಳು ಸುಟ್ಟ ಘಟನೆ ಸಮೀಪದ ಪ್ರಧಾನಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಭಾಗು ಜ್ಯೋತು ಪಾವಣೆ ಎಂಬ ರೈತನ ಬಣವೆಗಳು ಸುಟ್ಟಿವೆ. ಸ್ಥಳಕ್ಕೆ ಜೊಯಿಡಾ ತಾಲೂಕಿನ ಹಾಗೂ ದಾಂಡೇಲಿಯ ವೆಸ್ಟ್‌ಕೋಸ್ಟ್ ಕಾರ್ಖಾನೆಯ ಅಗ್ನಿಶಾಮಕ ದಳದ ವಾಹನಗಳು ಬಂದು ಬೆಂಕಿ ನಂದಿಸಲು ಸಹಕರಿಸಿದವು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net