ನಾಟಕ ೇತ್ರ ಶ್ರೀಮಂತಗೊಳಿಸಿದ ರಂಗ ವೈಭವ

The splendor of the stage enriched the theater scene.
ವಿಜಯಪುರದ ದಿ ಪ್ರೆಸಿಡೆನ್ಸಿ ಶಿಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರಂಗ ಚಿಂತನೆ ವಿಷಯದ ಕುರಿತು ಉಪನ್ಯಾಸ ಹಾಗೂ ಸನ್ಮಾನ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಡಾ. ವಿ.ಡಿ. ಐಹೊಳ್ಳಿ, ಅಂಬಾದಾಸ ಜೋಶಿ, ಡಾ. ಸುಮಾ ಬೋಳರಡ್ಡಿ ಮತ್ತಿತರರಿದ್ದಾರೆ.
Published on

ವಿಜಯಪುರ: ಪ್ರಪಂಚವೇ ಒಂದು ನಾಟಕ ಮಂದಿರ. ನಾವೆಲ್ಲ ಪಾತ್ರಧಾರಿಗಳು. ಬಣ್ಣದ ಜಗತ್ತಿನಲ್ಲಿ ಭಗವಂತನೇ ಸೂತ್ರದಾರ. ಪ್ರಪಂಚದಲ್ಲಿರುವ ಪ್ರತಿಯೊಬ್ಬರೂ ಕಲಾವಿದರೇ ಎಂದು ಕಲಾವಿದ ಅಂಬಾದಾಸ ಜೋಶಿ ಹೇಳಿದರು.

ನಗರದ ದಿ ಪ್ರೆಸಿಡೆನ್ಸಿ ಶಿಣ ಮಹಾವಿದ್ಯಾಲಯದಲ್ಲಿ ರಂಗ ವೈಭವ ಹವ್ಯಾಸಿ ನಾಟಕ ತಂಡದ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಂಗ ಚಿಂತನೆ ವಿಷಯದ ಕುರಿತು ಉಪನ್ಯಾಸ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ ವೃತ್ತಿಯಲ್ಲಿರುವವರು ಕಲಾ ಆರಾಧಕರಾಗಿರಬೇಕು. ಟೂರಿಂಗ್​ ಟಾಕೀಸ್​ಗಳಿದ್ದ ಕಾಲದಲ್ಲಿ ಕ್ರಿ.ಶ 1988 ರಲ್ಲಿ ರಂಗ ವೈಭವ ಕಲಾ ತಂಡ ಉತ್ತಮ ನಾಟಕಗಳನ್ನು ಪ್ರದರ್ಶಿಸಿ ರಂಗ ೇತ್ರವನ್ನು ಶ್ರೀಮಂತಗೊಳಿಸಿದೆ. ಸಮಾಜವನ್ನು ತಿದ್ದುವ ಶಕ್ತಿ ನಾಟಕಗಳಿಗಿದ್ದು, ನಾಟಕ ರಂಗ ಬದುಕಿನ ಅವಿಭಾಜ್ಯ ಅಂಗ ಎಂದು ಅವರು ತಿಳಿಸಿದರು.

ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ಡಾ. ವಿ.ಡಿ. ಐಹೊಳ್ಳಿ ಮಾತನಾಡಿ, ಕಲೆ ಕೆಲವೊಬ್ಬರಿಗೆ ಅನುವಂಶಿಕವಾಗಿ ಬಂದರೆ ಇನ್ನೂ ಕೆಲವರಿಗೆ ಪರಿಸರದಿಂದ ಬೆಳೆದು ಬರುತ್ತದೆ. ಮನೆಗೆ ಒಲೆ ಹೇಗೆ ಮುಖ್ಯವೋ ವ್ಯಕ್ತಿಗೆ ಕಲೆ ಹಾಗೆಯೇ ಮುಖ್ಯ. ವಿದ್ಯಾರ್ಥಿಯಾಗಿದ್ದಾಗಲೇ ಬಂಥನಾಳ ಶ್ರೀಗಳು ತಾರಾಮತಿ ಪಾತ್ರದಲ್ಲಿ ಮಿಂಚಿ ಪ್ರೇಕರ ಮನಸೂರೆಗೊಂಡಿದ್ದರು.ನಾಟಕ ಸಾಮ್ರಾಟ ಶ್ರೀರಂಗರು ವಿಜಯಪುರದವರು.

ಸಮಾಜದ ಅಂಕುಡೊಂಕು ತಿದ್ದುವ ನಾಟಕಗಳು ನಡೆದಾಡುವ ವಿಶ್ವವಿದ್ಯಾಲಯಗಳಾಗಿವೆ ಎಂದರು.

ಅಧ್ಯತೆ ವಹಿಸಿದ್ದ ಪ್ರಾಚಾಯೆರ್ ಡಾ. ಸುಮಾ ಬೋಳರಡ್ಡಿ ಮಾತನಾಡಿ, ದೇವಸ್ಥಾನಕ್ಕೆ ಹೋಗಿ ಬಂದ ಜಲ ತೀರ್ಥವಾದಂತೆ, ನಾಟಕ ನೋಡಿದ ಮೇಲೆ ಮನುಷ್ಯ ಮಹಾ ಮಾನವನಾಗುತ್ತಾನೆ. ಹೀಗಾಗಿ ನಾಟಕ ರಂಗ ಉಳಿಸಿ ಬೆಳೆಸೋಣ ಎಂದು ಸಲಹೆ ನೀಡಿದರು.

ಎಕ್ಸಲಂಟ್​ ಪ.ಪೂ. ಕಾಲೇಜಿನ ಉಪನ್ಯಾಸಕ ಶರಣಗೌಡ ಪಾಟೀಲ ಮಾತನಾಡಿದರು. ನೀನಾಸಂ ಪದವೀಧರ ಡಾ. ಸಂಗಮೇಶ ಮೇತ್ರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರಾಧಿಕಾ ಹಾದಿಮನಿ ಪ್ರಾರ್ಥಿಸಿದರು. ರಾಜೇಶ್ವರಿ ಪುಟ್ಟಿ ಸ್ವಾಗತಿಸಿ ಗೌರವಿಸಿದರು. ಡಾ. ಮಾಧವ ಗುಡಿ ನಿರೂಪಿಸಿದರು. ಜಗದೀಶ ಗಲಗಲಿ ವಂದಿಸಿದರು.

ಪೊನ್ನಪ್ಪ ಕಡೇಮನಿ, ವಿದ್ಯಾಧರ ಸಾಲಿ, ವಿಶ್ವೇಶ್ವರ ಮಠಪತಿ, ಅಪ್ಪಣ್ಣ ನಾಯಕ, ವಿಜಯಕುಮಾರ ಪಟ್ಟಣಶೆಟ್ಟಿ, ಉದಯ ಬೆಳ್ಳೆಣ್ಣವರ, ಚಂದ್ರು ನಿಂಬಾಳ, ಪ್ರವಿಣ ಡೋಣೂರ, ವಿಜಯಕುಮಾರ ಸಜ್ಜನ, ಜಗದೀಶ ಗಲಗಲಿ ಮತ್ತಿತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net