

ಚಿತ್ರದುರ್ಗ: ದೈವ, ನದಿ, ಋಷಿ, ಸನ್ಯಾಸಿ, ಧರ್ಮದ ಮೂಲ ಪ್ರಶ್ನಿಸ ಬಾರದೆಂದು ಗುರು-ಹಿರಿಯರು ಹೇಳಿದ್ದರೂ, ಕೆದಕಿ, ಕೆದಕಿ ಪ್ರಶ್ನಿಸುವ ಮೂಲಕ ಸಂಘರ್ಷ ಹುಟ್ಟು ಹಾಕಲಾಗುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು.
ಸಿರಿಗೆರೆಯಲ್ಲಿ ಭಾನುವಾರ ಹಮ್ಮಿಕೊಡಿದ್ದ ಶ್ರೀ ಶಿವಕುಮಾರ ಶಿವಾಚಾರ‌್ಯ ಸ್ವಾಮೀಜಿ ಅವರ 31ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಮಾತನಾಡಿದರು.
ಸನಾತನ ಧರ್ಮದ ಪರ-ವಿರುದ್ಧ ಹೇಳಿಕೆಗಳು ಕೇಳಿಬರುತ್ತಿವೆ. ಅದಕ್ಕಿಂತಲೂ ಮನುಷ್ಯ ಧರ್ಮದ ಕುರಿತು ಮೊದಲು ಚಿಂತಿಸ ಬೇಕಿದೆ. ನಮ್ಮ ಮಾತುಗಳಿಂದ ಮತ್ತೊಬ್ಬರಿಗೆ ನೋವಾಗುತ್ತದೆ ಎಂದರೆ ಅಂಥ ಮಾತುಗಳನ್ನು ಆಡಬಾರದು ಎಂದು ಹೇಳಿದರು.